Wednesday, September 9, 2026
spot_imgspot_img
spot_imgspot_img

1,000 ಕ್ಷಿಪಣಿಗಳು ಗುರಿ ಇಟ್ಟು ದಾಳಿಗೆ ನಿಂತಿವೆ- ಇರಾನ್‌ಗೆ ಎಚ್ಚರಿಕೆ ನೀಡಿದ ಟ್ರಂಪ್

- Advertisement -
- Advertisement -

ವಾಷಿಂಗ್ಟನ್: ಇರಾನ್ ದೇಶದ ಮೇಲೆ ದಾಳಿ ಮಾಡಲು ಅಮೆರಿಕದ 1,000 ಕ್ಷಿಪಣಿಗಳು ಸಕಲ ಸಿದ್ಧತೆಗಳೊಂದಿಗೆ ಗುರಿ ಇಟ್ಟು ನಿಂತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಗೆ ಎಚ್ಚರಿಕೆ ನೀಡಿದ್ದಾರೆ.

ತನ್ನ ಹತ್ಯೆಗೆ ಇರಾನ್ ಸಂಚು ರೂಪಿಸಿದ ವಿಚಾರ ತಿಳಿದು, ತಮ್ಮ ಸಾಮಾಜಿಕ ಮಾಧ್ಯಮ ಜಾಲತಾಣ ಟ್ರುತ್ ಸೋಶಿಯಲ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅವರು, “ಅಮೆರಿಕದ ಮಿಲಿಟರಿ ಪಡೆಗಳಿಗೆ ಈಗಾಗಲೇ ಸ್ಪಷ್ಟ ಆದೇಶ ನೀಡಲಾಗಿದೆ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಮೇಲೆ ದಾಳಿ ಮಾಡಲು 1,000 ಕ್ಷಿಪಣಿಗಳು ಲಾಕ್ ಅಂಡ್ ಲೋಡ್ ಆಗಿ ಸಿದ್ಧವಾಗಿವೆ” ಎಂದು ತಿಳಿಸಿದ್ದಾರೆ.

“ಅಮೆರಿಕದ ಹಾಲಿ ಅಧ್ಯಕ್ಷರನ್ನು, ಅಂದರೆ ನನ್ನನ್ನು ಹತ್ಯೆ ಮಾಡಲು ಅಥವಾ ಹತ್ಯೆಗೆ ಇರಾನ್ ಸರ್ಕಾರ ಯತ್ನಿಸಿದರೆ, ಈ ಸಾವಿರ ಕ್ಷಿಪಣಿಗಳ ಬೆನ್ನಲ್ಲೇ ಇನ್ನೂ ಸಾವಿರಾರು ಕ್ಷಿಪಣಿಗಳು ಇರಾನ್ ಮೇಲೆ ಬೀಳಲಿವೆ. ಅಮೆರಿಕ ಮಿಲಿಟರಿ ಪಡೆಗಳು ಇರಾನ್‌ನ ಇಂಚಿಂಚು ಪ್ರದೇಶವನ್ನು ಸಂಪೂರ್ಣವಾಗಿ ಧ್ವಂಸ ಮಾಡಲು ಸನ್ನದ್ಧವಾಗಿವೆ. ಈ ಮಿಲಿಟರಿ ಕಾರ್ಯಾಚರಣೆಯ ಆದೇಶವು ಸದ್ಯಕ್ಕೆ ಒಂದು ವರ್ಷದ ಅವಧಿಗೆ ಜಾರಿಯಲ್ಲಿದ್ದು, ಅಗತ್ಯ ಬಿದ್ದರೆ ಇದನ್ನು ವಿಸ್ತರಿಸಲಾಗುವುದು” ಎಂದು ಘೋಷಿಸಿದ್ದಾರೆ.

- Advertisement -

Related news

error: Content is protected !!