Thursday, June 4, 2026
spot_imgspot_img
spot_imgspot_img

ಸುಳ್ಯ: ಕುಣಿತ ಭಜನೆ ಮಾಡುತ್ತಾ ಕುಸಿದು ಬಿದ್ದು ಮಹಿಳೆ ಸಾವು!

- Advertisement -
- Advertisement -

ಸುಳ್ಯ : ಈಶ್ವರಮಂಗಲ ಕಾವು ಮುತ್ತು ಮಾರಿಯಮ್ಮ ದೇವಸ್ಥಾನದ ಜಾತ್ರೋತ್ಸವದಲ್ಲಿ ಸುಳ್ಯಪದವು ಮಹಾಲಕ್ಷ್ಮಿ ವನಿತಾ ಭಜನಾ ಮಂಡಳಿಯ ಸದಸ್ಯೆ ರತ್ನಾವತಿ ಬಾಳಪ್ಪ ಪೂಜಾರಿ ಕನ್ನಡ್ಕ (63) ಅವರು ಕುಣಿತ ಭಜನೆ ಮಾಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆ ತೆಗೆದುಕೊಂಡು ಹೋಗಲಾಗಿದ್ದು, ಅಲ್ಲಿಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದರು. ಸಾವಿಗೆ ಹೃದಯಾಘಾತ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಇವರ ಇಬ್ಬರು ಪುತ್ರರು ಹಾಗೂ ಮತ್ತು ಪತಿ ಈ ಮೊದಲೇ ಮೃತಪಟ್ಟಿದ್ದು, ಬಳಿಕ ಒಂಟಿಯಾಗಿದ್ದರು. ದೇವರಲ್ಲಿ ಅಪಾರ ಭಕ್ತಿ ಹೊಂದಿದ್ದ ಅವರಿಗೆ ಫೆ. 27ರಂದು ಭಜನೆಗೆ ಬರಲು ಸಾಧ್ಯವಾಗಿರಲಿಲ್ಲ. ಫೆ. 28ರಂದು ಎರಡು ಭಜನೆ ಮಾಡಿದ ಬಳಿಕ ಮೂರನೇ ಭಜನೆ ಸಂದರ್ಭದಲ್ಲಿ ಕುಸಿದು ಬಿದ್ದಿದ್ದಾರೆ ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!