

ಪುತ್ತೂರು: ಸುಳ್ಯದಲ್ಲಿ ಕೆಲ ತಿಂಗಳ ಹಿಂದೆ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ನಿಲಯ ಮೇಲ್ವಿಚಾರಕಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸುಳ್ಯದ ಡೆಂಟಲ್ ಕಾಲೇಜಿನಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಲ ತಿಂಗಳ ಬಗ್ಗೆ ವರದಿಯಾಗಿತ್ತು. ಬಗ್ಗೆ ಮೃತ ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನಲ್ಲಿ ’ ‘ತನ್ನ ಮಗಳು ವಿದ್ಯಾಭ್ಯಾಸ ಮಾಡುತ್ತಿರುವ ವೇಳೆ ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನವೀನ್ ಎಂಬ ವಿದ್ಯಾರ್ಥಿಯು ಮಗಳಿಗೆ ಫೋನ್ ಕರೆ ಮಾಡಿ, ನಿನ್ನ ಫೋಟೋಸ್ ಮತ್ತು ವಿಡಿಯೋಗಳನ್ನು ನಿನ್ನ ತಂದೆಗೆ ಹಾಗು ಸಹೋದರನಿಗೆ ಕಳುಹಿಸುತ್ತೇನೆಂದು ಆಗಾಗ ಬೆದರಿಕೆ ಹಾಕುತ್ತಿದ್ದುದರಿಂದ ತನ್ನ ಮಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳ ಈ ಸಾವಿಗೆ ವಿದ್ಯಾರ್ಥಿ ನವೀನ ನೀಡುತ್ತಿದ್ದ ಕಿರುಕುಳ ಕಾರಣವಾಗಿದೆ ಮತ್ತು ಮಗಳು ವಾಸಿಸಿಕೊಂಡು ಬರುತ್ತಿದ್ದ ‘ನರ್ಮಾದ’ ವಸತಿ ನಿಲಯದ ಮೇಲ್ವಿಚಾರಕಿ ತಾರಾಕುಮಾರಿಗೆ ವಿಷಯ ತಿಳಿದಿದ್ದರೂ ಆ ಬಗ್ಗೆ ನನಗೆ ಮಾಹಿತಿಯನ್ನು ನೀಡದೆ ಕರ್ತವ್ಯಲೋಪ ಎಸಗಿ ತನ್ನ ಮಗಳ ಸಾವಿಗೆ ಕಾರಣ ಆಗಿದ್ದಾರೆ’ ಆರೋಪಿಸಿದ್ದರು.








