Friday, May 17, 2024
spot_imgspot_img
spot_imgspot_img

ಸುಳ್ಯ ಹಾಗೂ ಪುತ್ತೂರು ಜ್ಯುವೆಲ್ಲರ್ಸ್ ಗಳಲ್ಲಿ ಸರಣಿ ಕಳ್ಳತನ ಪ್ರಕರಣ; ಅಂತರಾಜ್ಯ ಕಳ್ಳರನ್ನು ಹೆಡೆಮುರಿ ಕಟ್ಟಿದ ಪೊಲೀಸರು

- Advertisement -G L Acharya panikkar
- Advertisement -

ಸುಳ್ಯ: ತಿಂಗಳ ಹಿಂದೆ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಮೋಹನ್ ಜ್ಯುವೆಲ್ಲರಿ ಮಾರ್ಟ್ ಮತ್ತು ಪುತ್ತೂರಿನ ಶ್ರೀಧರ್ ಭಟ್ ಹಾಗೂ ನವಮಿ ಜ್ಯುವೆಲ್ಲರ್ಸ್ ಗಳನ್ನು ದೋಚಿದ ಕಳ್ಳರನ್ನು ಸುಳ್ಯ ಪೋಲೀಸರು ಬಂಧಿಸಿದ್ದಾರೆ.

ಅಂತರಾಜ್ಯ ಕಳ್ಳರಾದ ತಂಗಚ್ಚ ತೆಕ್ಕಮೊಯೊಕಲ್ ಕಣ್ಣೂರು ಹಾಗೂ ಶಿಬು ಅಂಬಳೂರು ಕೇರಳ ಇವರಿಬ್ಬರನ್ನು ವಶ ಪಡಿಸಿರುವ ಪೋಲೀಸರು ಬಂಧಿಸಿದ್ದಾರೆ.

ಮಾರಾಟಕ್ಕೆಂದು ಇಟ್ಟಿದ್ದ 400 ಗ್ರಾಂ ಹಳೆ ಚಿನ್ನ ನವೀಕರಿಸಲು ಬಂದ 4 ಚಿನ್ನದ ಬಳೆ, 1 ಜೊತೆ ಬೆಂಡೋಲೆ, 1ನೆಕ್ಲೆಸ್ ಹಾಗೂ 2 ಚಿನ್ನದ ನಾಣ್ಯ ಲಕ್ಷ್ಮೀ ಮಿಸಿರಿಗಳು ಹಾಗೂ ಸಣ್ಣ ಪುಟ್ಟ ಆಭರಣಗಳು -75 ಗ್ರಾಂ, ಒಟ್ಟು ಚಿನ್ನಾಭರಣ 180 ಗ್ರಾಂ ಅದರ ಅಂದಾಜು ಮೌಲ್ಯ 7,50,000 ರೂ ಹಾಗೂ ಕ್ಯಾಶ್ ಡ್ರಾವರ್ ನಲ್ಲಿದ್ದ ಅಂದಾಜು 50,000/- ನಗದನ್ನು ದೋಚಿಕೊಂಡು ಹೋಗಿದ್ದರು.

ಆರೋಪಿಗಳಿಂದ ಸುಳ್ಯ ಠಾಣಾ ಅ.ಕ್ರ. 21/2021 ಕಲಂ 457, 380 ಐ ಪಿ ಸಿ, ಪುತ್ತೂರು ಠಾಣಾ ಅ.ಕ್ರ 20/21ಕಲಂ 457, 380 ಐ ಪಿ ಸಿ ಮತ್ತು ಅ.ಕ್ರ 22/21 ಕಲಂ ಕಲಂ 457, 380 ಐ ಪಿ ಸಿ ಪ್ರಕರಣಕ್ಕೆ ಸಂಬಂಧಿಸಿದ ಸುಮಾರು 6,61,500/- ಮೌಲ್ಯದ 147.00 ಗ್ರಾಂ ಚಿನ್ನಾಭರಣ ಹಾಗು ಕೃತ್ಯಕ್ಕೆ ಉಪಯೋಗಿಸಿದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಪ್ರಕರಣದಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನವನೆ ಐ ಪಿ ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಭಾಸ್ಕರ್ ಹಾಗೂ ಪೊಲೀಸ್ ಉಪಧೀಕ್ಷಕರಾದ ಗಾನಾ ಪಿ ಕುಮಾರ್ ರವರ ಮಾರ್ಗದರ್ಶನದಲ್ಲಿ ಸುಳ್ಯ ವೃತ್ತ ನಿರೀಕ್ಷಕರಾದ ನವೀನ್ ಚಂದ್ರ ಜೋಗಿ ಮತ್ತು ಸುಳ್ಯ ಠಾಣಾ ಪಿಎಸ್‌ಐ ಹರೀಶ್ ಎಂ ಆರ್ ಮತ್ತು ರತನ್ ಕುಮಾರ್ ಮತ್ತು ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

driving
- Advertisement -

Related news

error: Content is protected !!