- Advertisement -
- Advertisement -



ಸುಳ್ಯ: ಮನೆಯೊಂದರಲ್ಲಿ ನಡೆದ ದರೋಡೆ ಪ್ರಕರಣದಲ್ಲಿ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತಮಿಳುನಾಡಿನ ತಿರುವರೂರ್ ನಿವಾಸಿ ಸುಧಾಕರ ಆರ್ಮುಗಮ್ (42) ಎಂದು ಗುರುತಿಸಲಾಗಿದೆ.
20.03.2022ರಂದು ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆ ಗ್ರಾಮದ ಚೆಟ್ಟೆಕಲ್ಲು ಎಂಬಲ್ಲಿನ ಮನೆಯೊಂದರಲ್ಲಿ ನಡೆದ ರೂ 1,50,000/- ನಗದು ಹಾಗೂ 01 ಮೊಬೈಲ್ ಫೋನ್ ದರೋಡೆ ಪ್ರಕರಣದಲ್ಲಿ, ತಲೆಮರೆಸಿಕೊಂಡಿದ್ದ ಆರೋಪಿ ಆರ್ಮುಗಮ್ ಎಂಬಾತನನ್ನು, ಸುಳ್ಯ ಠಾಣಾ ಪೊಲೀಸರು ಜು.4.07.2025 ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
- Advertisement -