Monday, June 8, 2026
spot_imgspot_img
spot_imgspot_img

ವಿಟ್ಲ: ವಿದೇಶಕ್ಕೆ ಹೋಗುವ ಮಗಳನ್ನು ಏರ್‌ಪೋರ್ಟ್‌ಗೆ ಕಳುಹಿಸಲು ಹೋಗಿದ್ದಾಗ ಮನೆಕಳ್ಳತನ.! ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು..!!

- Advertisement -
- Advertisement -

ವಿಟ್ಲ: ವಿದೇಶಕ್ಕೆ ಹೋಗಲು ಮಗಳನ್ನು ಏರ್‌ಪೋರ್ಟ್‌ಗೆ ಕಳುಹಿಸಲು ಹೋಗಿದ್ದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ, ನಗದನ್ನು ದೋಚಿದ ಘಟನೆ ವೀರಕಂಭದಲ್ಲಿ ನಡೆದಿದೆ.

ವೀರಕಂಭ ಬೊಣ್ಯಕುಕ್ಕು ಜನತಾ ಕಾಲೋನಿಯ ಮಹಮ್ಮದ್ ಮುಸ್ಲಿಯಾರ್ ಕುಟುಂಬ ನಿನ್ನೆ ರಾತ್ರಿ ವಿದೇಶಕ್ಕೆ ಹೋಗುವ ಮಗಳನ್ನು ಕಳುಹಿಸಲು ಮಂಗಳೂರು ಏರ್‌ಪೋರ್ಟ್‌ಗೆ ಹೋಗಿದ್ದರು. ಮರಳಿ ಬಂದಾಗ ಮನೆಯ ಬಾಗಿಲು ತೆರೆದಿತ್ತಲ್ಲದೇ, ಛಾವಣಿಗೆ ಏಣಿ ಇಟ್ಟು ಮನೆಯೊಳಗೆ ನುಗ್ಗಿ ಕಪಾಟಿನ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಕಳ್ಳತನ ನಡೆಸಿರುವುದು ಕಂಡುಬಂದಿದೆ.

ಈ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಿದ್ದು ಪರಿಚಿತರೇ ಕಳ್ಳತನ ನಡೆಸಿರುವುದು ಸ್ಪಷ್ಟವಾಗಿದೆ.

- Advertisement -

Related news

error: Content is protected !!