Friday, May 3, 2024
spot_imgspot_img
spot_imgspot_img

ಸುಳ್ಯ: ಅಳಿವಿನಂಚಿನ ದೈತ್ಯ ಅಳಿಲು, ಹಾರುವ ಅಳಿಲುಗಳನ್ನು ಭೇಟೆಯಾಡಿ ಖಾದ್ಯ ತಯಾರಿ; ಅರಣ್ಯಾಧಿಕಾರಿಗಳು ದಾಳಿ – ಆರೋಪಿಗಳು ಎಸ್ಕೇಪ್

- Advertisement -G L Acharya panikkar
- Advertisement -

ಸುಳ್ಯ: ಸಂಪಾಜೆ ವಲಯದ ಡಬ್ಬಡ್ಕ ಪಟ್ಟಿಘಾಟ್ ಮೀಸಲು ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ವಿನಾಶದಂಚಿನಲ್ಲಿರುವ ಮಲಬಾರ್ ದೈತ್ಯ ಅಳಿಲು ಹಾಗೂ ಹಾರುವ ಅಳಿಲುಗಳನ್ನು ಬೇಟೆಯಾಡಿ ಖಾದ್ಯ ತಯಾರಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಬೇಯಿಸಿದ ಮಾಂಸವನ್ನು ವಶಕ್ಕೆ ಪಡೆದುಕೊಂಡ ಘಟನೆ ಸುಳ್ಯ ಗಡಿ ಭಾಗದಿಂದ ವರದಿಯಾಗಿದೆ.

ಕೊಡಗು ಸಂಪಾಜೆ ವಲಯದ ದಬ್ಬಡ್ಕದ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಿರುವ ಬಗ್ಗೆ ಸಂಪಾಜೆ ವಲಯ ಅರಣ್ಯ ಇಲಾಖೆಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳ ಮನೆಗಳಿಗೆ ದಾಳಿ ಮಾಡಿ ಮಾಂಸ ಮತ್ತು ಕೋವಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂದರ್ಭ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳನ್ನು ದಬ್ಬಡ್ಕ ಗ್ರಾಮದ ಮದನ್ ಕುಮಾರ್(38), ಗಣಪತಿ ಬಿನ್ ಮಾಚಯ್ಯ(50) ಹಾಗೂ ಪ್ರಸನ್ನ ಕುಮಾರ್(35) ಎಂಬುವುದಾಗಿ ಗುರುತಿಸಲಾಗಿದೆ.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಮತು ವಲಯ ಅರಣ್ಯಾಧಿಕಾರಿ ಮಧುಸೂದನ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ನಿಸಾರ್ ಮುಹಮ್ಮದ್, ಗಸ್ತು ಅರಣ್ಯ ಪಾಲಕರಾದ ಚಂದ್ರಪ್ಪ, ಕಾರ್ತಿಕ್, ಮನೋಜ್ ಕುಮಾರ್, ದುರ್ಗಾಪ್ರಸಾದ್, ಗಗನ್, ಶರತ್, ಶಂಕರ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- Advertisement -

Related news

error: Content is protected !!