Monday, October 19, 2026
spot_imgspot_img
spot_imgspot_img

ಸುಳ್ಯ: ನಾಲ್ಕೈದು ತಿಂಗಳುಗಳಿಂದ ಕಳ್ಳತನ ನಡೆಸುತ್ತಿದ್ದ ಖತರ್ನಾಕ್ ಕಳ್ಳನ ಬಂಧನ!

- Advertisement -
- Advertisement -

ಸುಳ್ಯ: ಹಳೆಗೇಟು ನರ್ಸರಿ ಒಂದರಲ್ಲಿ ಕಳೆದ ನಾಲ್ಕೈದು ತಿಂಗಳುಗಳಿಂದ ರಾತ್ರಿ ಸಮಯದಲ್ಲಿ ನಿರಂತರವಾಗಿ ವ್ಯಾಪಾರಕ್ಕೆಂದು ಇಟ್ಟಿದ್ದ ಸಾಮಗ್ರಿಗಳ ಕಳ್ಳತನ ನಡೆಯುತ್ತಿತ್ತು.

ಈತನನ್ನು ಹಿಡಿಯಬೇಕೆಂದು ಹಲವು ಬಾರಿ ಸಂಸ್ಥೆಯ ಮಾಲಕರು ಹೊಂಚುಹಾಕಿ ಕುಳಿತದ್ದರು, ಆದರೆ ಫೆ.15 ರಂದು ಕಳ್ಳನು ನರ್ಸರಿಗೆ ಕಟ್ಟಿದಂತಹ ಶೆಡ್ಡಿನ ಹಿಂಭಾಗದಿಂದ ಕಳ್ಳತನಕ್ಕೆ ನುಗ್ಗಿದಾಗ ಆತನನ್ನು ಹಿಡಿಯಲು ಹೊಂಚು ಹಾಕಿದ್ದ ಸಂಸ್ಥೆಯ ಸಿಬ್ಬಂದಿ, ಸ್ಥಳೀಯರ ಸಹಾಯದಿಂದ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೂಡಲೇ ಸುಳ್ಯ ಠಾಣೆಗೆ ವಿವರವನ್ನು ನೀಡಿ ಪೊಲೀಸರು ಸ್ಥಳಕ್ಕೆ ಬಂದು ಅವನನ್ನು ಠಾಣೆಗೆ ಕೊಂಡೊಯ್ದಿದ್ದಾರೆ. ಈ ವ್ಯಕ್ತಿಯು ಸ್ಥಳೀಯ ನಿವಾಸಿಯಾಗಿದ್ದು ಕಳ್ಳತನವನ್ನು ಮಾಡಿದ ವಸ್ತುಗಳನ್ನು ಸ್ಥಳೀಯ ವ್ಯಾಪಾರಸ್ಥರಿಗೆ ನೀಡುತ್ತಿದ್ದ ಎಂಬುವುದು ತಿಳಿದುಬಂದಿದೆ.

- Advertisement -

Related news

error: Content is protected !!