



ಸುಳ್ಯ: ಯುವತಿಯೋರ್ವಳು ಮನೆಯಲ್ಲಿ ತನ್ನ ಅಜ್ಜಿ ಮನೆಗೆ ಹೋಗುತ್ತೇನೆಂದು ಹೇಳಿ ಹೋದವಳು ತನ್ನ ಅಜ್ಜಿಯ ಮನೆಗೆ ಹೋಗದೇ ನಾಪತ್ತೆಯಾದ ಘಟನೆ ಸುಳ್ಯದಲ್ಲಿ ನಡೆದಿದೆ.
ನಾಪತ್ತೆಯಾದ ಯುವತಿಯನ್ನು ನಾಸಿಯಾ (18) ಎಂದು ಗುರುತಿಸಲಾಗಿದೆ.
ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮ ಗಾಂಧಿನಗರ ನಿವಾಸಿ ತಾಹಿರ ಎಂಬವರ ದೂರಿನಂತೆ “ನನ್ನ ಮೊದಲನೇ ಗಂಡ ಮಹಮ್ಮದ್‌ರವರು ಕಳೆದ 14ವರ್ಷಗಳ ಹಿಂದೆ ಸ್ವಾಭವಿಕವಾಗಿ ಮೃತಪಟ್ಟಿದ್ದು ಮೊದಲನೇ ಗಂಡನಿಂದ ನನಗೆ ಎರಡು ಮಕ್ಕಳು. ಮೊದಲನೇ ಮಗ ನಾಸೀರ್(23) ಎರಡನೇ ಮಗಳು ನಾಸಿಯಾ(18ವರ್ಷ 6 ತಿಂಗಳು) ಆಗಿರುತ್ತಾರೆ. ಮೊದಲನೇ ಗಂಡ ತೀರಿ ಹೋದ ಬಳಿಕ ನಾನು ಕಳೆದ 12 ವರ್ಷಗಳ ಹಿಂದೆ ಮೊದಲನೇ ಗಂಡನ ತಮ್ಮ ಹಮೀದ್‌ರವರನ್ನು ಮದುವೆಯಾಗಿರುತ್ತೇನೆ. ಎರಡನೇ ಗಂಡನಿಂದ ನನಗೆ ಒಂದು ಗಂಡು ಮಗು ನೌಷದ್(12ವರ್ಷ) ಇರುತ್ತಾನೆ. ಮೊದಲನೇ ಮಗ ಸ್ಥಳೀಯ ಹಣ್ಣಿನ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ಮಗಳು ಬಿ ಎ ವ್ಯಾಸಂಗವನ್ನು ಕಾಲೇಜಿಗೆ ಹೋಗಲು ಇಷ್ಟ ಇಲ್ಲದೇ ಅರ್ಧಕ್ಕೆ ಮೊಟಕುಗೊಳಿಸಿ ಮನೆಯಲ್ಲಿಯೇ ಇದ್ದಳು.
ಮಗಳು ಬೆಳ್ಳಾರೆಯ ನಿವಾಸಿ ರಿಯಾಜ್ ಎಂಬಾತನನ್ನು ಪ್ರೀತಿಸುತ್ತಿದ್ದ ವಿಚಾರ ತಿಳಿದಿರುತ್ತದೆ. ನಮ್ಮ ಮನೆಗೆ ಹೊಂದಿಕೊಂಡಂತೆ ನನ್ನ ತಂಗಿ ಸಾಜಿದಾರವರ ಮನೆ ಇರುತ್ತದೆ. ದಿನಾಂಕ:03.10.2025ರಂದು ಮದ್ಯಾಹ್ನ ಸಮಯ 3:30ಗಂಟೆಗೆ ಮಗಳು ನಾಸಿಯಾ ಮನೆಯಲ್ಲಿ ತನ್ನ ಅಜ್ಜಿ ಮನೆಗೆ ಹೋಗುತ್ತೇನೆಂದು ಹೇಳಿ ಹೋದವಳು ತನ್ನ ಅಜ್ಜಿಯ ಮನೆಗೆ ಹೋಗಿರುವುದಿಲ್ಲವಾಗಿ ಬಳಿಕ ತಿಳಿದು ಬಂದಿದೆ. ಮಗಳ ಪತ್ತೆ ನಮ್ಮ ಸಂಬಂದಿಕರಲ್ಲಿ ಹಾಗೂ ಮಗಳ ಸ್ನೇಹಿತೆಯರಲ್ಲಿ ವಿಚಾರಿಸಿ ಸುಳ್ಯ ಪೇಟೆಯಲ್ಲಿ ಹುಡುಕಲಾಗಿ ಮಗಳ ಪತ್ತೆ ಬಗ್ಗೆ ಯಾವುದೇ ಪೂರಕವಾದ ಮಾಹಿತಿ ಲಭ್ಯವಾಗಿರುವುದಿಲ್ಲ. ಅದುದ್ದರಿಂದ ಕಾಣೆಯಾಗಿರುವ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ಸುಳ್ಯ ಪೊಲೀಸ್ ಠಾಣಾಧಿಕಾರಿಯವರಿಗೆ ವಿನಂತಿಸಿಕೊಳ್ಳುತ್ತೇನೆ” ಎಂದು ನಾಪತ್ತೆಯಾದ ಯುವತಿಯ ತಾಯಿ ತಾಹಿರ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.
ನಾಸಿಯಾ (18)ರವರು 5.5 ಅಡಿ ಎತ್ತರವಿದ್ದು, ಕೆಂಪು-ಬಿಳಿ ಮೈ ಬಣ್ಣ ಹೊಂದಿದ್ದು, ಗಿಳಿ ಪಚ್ಚೆ ಬಣ್ಣದ ಗೌನ್ (ಮೇಲ್ಭಾಗ ಕಪ್ಪು ಬಣ್ಣದ ಬುರ್ಖಾ ಧರಿಸಿರುತ್ತಾಳೆ) ಕನ್ನಡ, ಮಳಿಯಾಳಂ ಭಾಷೆ ಮಾತನಾಡುತ್ತಾಳೆ.








