Sunday, June 29, 2025
spot_imgspot_img
spot_imgspot_img

ಸುಳ್ಯ; ಶೌಚಾಲಯದ ಗೋಡೆ ಕುಸಿದು 2 ಮಹಿಳೆಯರು ದಾರುಣ ಸಾವು..!

- Advertisement -
- Advertisement -
vtv vitla
vtv vitla
vtv vitla
vtv vitla
vtv vitla

ಸುಳ್ಯ: ಶೌಚಾಲಯದ ಹಳೆಯ ಗೋಡೆಯನ್ನು ಕೆಡವುತ್ತಿದ್ದ ವೇಳೆ ಮಣ್ಣಿನ ಇಟ್ಟಿಗೆಯ ಗೋಡೆ ಮೈಮೇಲೆ ಕುಸಿದು ಬಿದ್ದು ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಎಣ್ಮೂರು ಗ್ರಾಮದ ನರ್ಲಡ್ಕದಲ್ಲಿ ನಡೆದಿದೆ.

ನರ್ಲಡ್ಕ ನಿವಾಸಿ ಹರೀಶ ನಾಯ್ಕ ಎಂಬವರ ಮನೆಯ ಹಳೆಯ ಶೌಚಾಲಯದ ಗೋಡೆ ಕೆಡವುವ ವೇಳೆ ಈ ದುರ್ಘಟನೆ ಸಂಘವಿಸಿದೆ. ಗೋಡೆಯನ್ನು ತೆಗೆದು ಹೊಸ ಕಟ್ಟಡ ಕಟ್ಟುವುದಕ್ಕಾಗಿ ಕೆಲಸ ಮಾಡಲಾಗುತ್ತಿತ್ತು. ಇತರ ಕೆಲಸಗಾರರ ಜತೆ ಸಮೀಪದ ಮನೆಯ ಬೀಪಾತುಮ್ಮ (60) ಮತ್ತು ನೆಬಿಸಾ(45) ರವರು ಕಾಮಗಾರಿ ಕೆಲಸದಲ್ಲಿ ತೊಡಗಿದ್ದರು. ಆ ವೇಳೆ ಮಣ್ಣಿನ ಇಟ್ಟಿಗೆಯ ಗೋಡೆ ಇವರ ಮೇಲೆ ಕುಸಿದು ಬಿದ್ದಿದೆ.

vtv vitla
vtv vitla

ತಕ್ಷಣ ಅಲ್ಲಿದ್ದವರು ಇವರನ್ನು ಮಣ್ಣಿನ ರಾಶಿಯಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದಾರಿ ಮಧ್ಯೆ ಇಬ್ಬರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಎಸ್ ಐ ಆಂಜನೇಯರೆಡ್ಡಿ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ ಮತ್ತಿತರರು ತೆರಳಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!