Thursday, May 9, 2024
spot_imgspot_img
spot_imgspot_img

ಸುಳ್ಯ: ಪೈಂಟಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಕಾಲು ಜಾರಿ ಬಿದ್ದು ಮೃತ್ಯು..!

- Advertisement -G L Acharya panikkar
- Advertisement -

ಸುಳ್ಯ: ಮನೆ ಮಾಲಿಕನ ನಿರ್ಲಕ್ಷತನದಿಂದ ಕೆಲಸಕ್ಕೆಂದು ಬಂದ ವ್ಯಕ್ತಿಯೋರ್ವರು ಮನೆಯ ಗೋಡೆಗಳಿಗೆ ಪೈಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಮೇಲಿಂದ ಬಿದ್ದು ಮೃತಪಟ್ಟ ಘಟನೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಚಾಂಬಲಂ ಬೇರ್ಕ ಚೆಂಗಲ್ ಪೊಸ್ಟ್, ಕಾಸರಗೋಡು ತಾಲೂಕು ಮತ್ತು ಜಿಲ್ಲೆ ಕೇರಳ ನಿವಾಸಿ ಅಬ್ದುಲ್ ಜಬ್ಬಾರ್(42) ಎಂದು ಗುರುತಿಸಲಾಗಿದೆ.

ಅಬ್ದುಲ್ ಜಬ್ಬಾರ್ ಎನ್.ಎಂ ಎಂಬವರು ಪೈಂಟಿಂಗ್ ಕೆಲಸವನ್ನು ಮಾಡಿಕೊಂಡಿದ್ದು, ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡ್ಕಾರ್ ನಿವಾಸಿ ಜಿ,ಪಿ ಅಬ್ದುಲ್ಲಾ ಕುಂಞ ರವರ ಮನೆಯ ಗೋಡೆಗಳಿಗೆ ಪೈಂಟಿಂಗ್ ಮಾಡಲು ತನ್ನ ಸ್ನೇಹಿತರೊಂದಿಗೆ ಹೋಗಿದ್ದರು.

ಈ ವೇಳೆ ಅಲ್ಲಿ ಕೆಲಸ ಮಾಡುತ್ತಿರುವಾಗ ಅಬ್ದುಲ್ ಜಬ್ಬಾರ್ ರವರು ಆಕಸ್ಮಿಕವಾಗಿ ಕಾಲು ಜಾರಿ ಮೇಲಿಂದ ಬಿದ್ದು ಗಾಯಗೊಂಡಿದ್ದು ಅವರನ್ನು ಅಲ್ಲೇ ಇದ್ದ ಅವರ ಸ್ನೇಹಿತರು ಹಾಗೂ ಮನೆಯ ಮಾಲಿಕ ಅಬ್ದುಲ್ಲಾ ರವರು ಅಬ್ದುಲ್ ಜಬ್ಬಾರ್ ನನ್ನು ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ,ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿರುತ್ತದೆ.

ಅಬ್ದುಲ್ ಜಬ್ಬಾರ್ ನನ್ನು ಮನೆಗೆ ಕರೆದುಕೊಂಡು ಬಂದಿದ್ದು, ಅಬ್ದುಲ್ ಜಬ್ಬಾರ್‌ನ ದೇಹವು ನಿಷ್ಕ್ರಿಯವಾಗಿರುವುದನ್ನು ಕಂಡು ಕೂಡಲೇ ಅಂಬ್ಯುಲೇನ್ಸ್ ವೊಂದರಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮನೆಯ ಮಾಲಕ ಜಿ.ಪಿ ಅಬ್ದುಲ್ಲಾರವರು ಯಾವುದೇ ಮುಂಜಾಗ್ರತೆ ಇಲ್ಲದೇ, ನಿರ್ಲಕ್ಷತನವಹಿಸಿ ಕೆಲಸ ಮಾಡಿಸಿರುವುದರಿಂದ ಅಬ್ದುಲ್ ಜಬ್ಬಾರ್ ರವರು ಬಿದ್ದು ಗಾಯಗೊಂಡು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ,ಕ್ರ ನಂ: 42/2024 ಕಲಂ: 304 (A) IPC ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!