ಸುಳ್ಯ: ಪ್ರಕರಣವೊಂದರ ವಾರಂಟ್ ಆರೋಪಿಯೋರ್ವ ವೈದ್ಯಕೀಯ ತಪಾಸಣೆ ಸಂದರ್ಭ ಆಸ್ಪತ್ರೆಯಿಂದಲೇ ಪರಾರಿಯಾಗಿರುವ ಘಟನೆ ಸುಳ್ಯದಲ್ಲಿ ಶನಿವಾರ ನಡೆದಿದೆ.
ಪರಾರಿಯಾಗಿರುವ ಆರೋಪಿಯನ್ನು ತಮಿಳುನಾಡು ಮೂಲದ ಕಿರಣ ಎಂದು ಗುರುತಿಸಲಾಗಿದೆ.
ಈತನು ಸುಳ್ಯದ ಕಲ್ಲುಗುಂಡಿ ಎಂಬಲ್ಲಿ ಕೆಲ ವರ್ಷಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿ ತಿಳಿದುಬಂದಿದೆ.
ಆರೋಪಿ ಕಾರ್ತಿಕ್ ನನ್ನು ಸುಳ್ಯದ ಇಬ್ಬರು ಪೊಲೀಸ್ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಸುಳ್ಯದ ಸರಕಾರಿ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಕರೆದೊಯ್ದಿದ್ದು, ಈ ವೇಳೆ ಓರ್ವ ಸಿಬ್ಬಂದಿ ಆಸ್ಪತ್ರೆಯ ಚೀಟಿ ಮಾಡಿಸಲು ತೆರಳಿದ್ದ ಸಂದರ್ಭ ಇನ್ನೊರ್ವ ಸಿಬ್ಬಂದಿಯೊಂದಿಗಿದ್ದ ಆರೋಪಿ ಸಮಯ ಸಾಧಿಸಿ ಅಲ್ಲಿಂದ ತಪ್ಪಿಸಿಕೊಂಡು ಪರಾರಿ ಯಾಗಿದ್ದಾನೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಿಂದ ಹೊರಬಂದ ಆರೋಪಿ ಕಾರ್ತಿಕ್ ರಸ್ತೆಗೆ ಬಂದು ಹತ್ತಿರದ ತೋಟಕ್ಕೆ ಜಿಗಿದು ತಪ್ಪಿಸಿಕೊಂಡಿದ್ದಾನೆ. ಕೂಡಲೇ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದು, ತಡರಾತ್ರಿವರೆಗೂ ಹುಡುಕಾಟ ಮುಂದುವರಿಸಿದ್ದರು ಎಂದು ತಿಳಿದುಬಂದಿದೆ.