Sunday, August 16, 2026
spot_imgspot_img
spot_imgspot_img

ಸುಳ್ಯ: ಆಟೋ ರಿಕ್ಷಾ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ

- Advertisement -
- Advertisement -

ಸುಳ್ಯ: ಆಟೋ ರಿಕ್ಷಾವನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆಯೊಡ್ಡಿರುವ ಘಟನೆ ಸುಳ್ಯದ ನಾಲ್ಕೂರು ಗ್ರಾಮದ ಗುಂಡಡ್ಕ ಎಂಬಲ್ಲಿ ನಡೆದಿದೆ. ಆರೋಪಿಗಳು ದಯಾನಂದ, ಲೋಕೇಶ್‌, ಜಯರಾಮ, ಮಂಜು ಎನ್ನಲಾಗಿದೆ.

ನಾಲ್ಕೂರು ನಿವಾಸಿ ತಸ್ಲೀಮ್ ಕೆ(34) ಎಂಬವರು ಆಟೋ ರಿಕ್ಷಾ ಚಲಾಯಿಸಿಕೊಂಡು ಗುಂಡಡ್ಕ ಬಳಿ ತಲುಪಿದಾಗ ಆರೋಪಿಗಳು ಆಟೋವನ್ನು ಅಡ್ಡಗಟ್ಟಿ ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುತ್ತಾರೆ. ಆರೋಪಿಗಳ ಪೈಕಿ ದಯಾನಂದ ಎಂಬಾತನ ಸಹೋದರನೊಂದಿಗೆ ಪಾರ್ಟಿ ನಡೆಸಿದ ಹಿನ್ನೆಲೆ ಹಲ್ಲೆ ನಡೆದಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!