Wednesday, June 17, 2026
spot_imgspot_img
spot_imgspot_img

ಸುಳ್ಯ : ನೀರಿನಲ್ಲಿ ಮುಳುಗಿ ವ್ಯಕ್ತಿ ಮೃತ್ಯು

- Advertisement -
- Advertisement -

ಸುಳ್ಯ : ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರು ಎಂಬಲ್ಲಿ ವ್ಯಕ್ತಿಯೊಬ್ಬರು ಬೆಳಗ್ಗೆ ಪಯಸ್ವಿನಿ ನದಿಗೆ ಸ್ನಾನಕ್ಕೆಂದು ತೆರಳಿದ್ದು ಸಂಜೆಯ ವೇಳೆಗೆ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಆರಂಭವೂರು ಮಾಜಿಗುಂಡಿ ನಿವಾಸಿ ನಿವೃತ ಶಿಕ್ಷಕ ದಿನೇಶ್ (65) ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಮನೆಯಿಂದ ಸ್ನಾನ ಮಾಡಲೆಂದು ಪಯಸ್ವಿನಿ ನದಿಗೆ ಹೋದವರು ಬಹಳ ಹೊತ್ತು ಕಳೆದರೂ ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಮತ್ತು ಸ್ಥಳೀಯರು ವಿಷಯ ತಿಳಿದು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಸಂಜೆ ವೇಳೆ ಅವರ ಮೃತದೇಹ ಮಜಿಗುಂಡಿ ಎಂಬಲ್ಲಿ ನದಿಯಲ್ಲಿ ತೇಲಿಕೊಂಡಿರುವುದು ಪಕ್ಕದ ಮನೆಯವರ ಗಮನಕ್ಕೆ ಬಂದಿದ್ದು ಸ್ಥಳೀಯರು ಸುಳ್ಯ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಪೋಲಿಸರು ಆಗಮಿಸಿದ ಬಳಿಕ ಸುಳ್ಯ ವಲಯದ ವಿಪತ್ತು ನಿರ್ವಹಣಾ ಘಟಕದವರು ಹಾಗೂ ಸ್ಥಳೀಯರು ನದಿಗೆ ಇಳಿದು ಶವವನ್ನು ಮೇಲೆಕ್ಕೆತ್ತಿದ್ದರು. ಮೃತರು ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ಅಸ್ವಸ್ಥರಾಗಿದ್ದರೆಂದು ತಿಳಿದು ಬಂದಿದೆ. ಮೃತರು ಪತ್ನಿ ಗೀತಾ, ಸಹೋದರಿ ಸಹೋದರ ಸುರೇಶ್ ಕಾಂಞಂಗಾಡ್ ಹಾಗೂ ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ.

- Advertisement -

Related news

error: Content is protected !!