Thursday, August 6, 2026
spot_imgspot_img
spot_imgspot_img

ಸುಳ್ಯ: ಕಿಂಡಿ ಆಣೆಕಟ್ಟಿನ ಸ್ಲ್ಯಾಬ್ ಮುರಿದು ದಂಪತಿಗೆ ಗಾಯ…!

- Advertisement -
- Advertisement -

ಸುಳ್ಯ: ಸುಮಾರು 45 ವರ್ಷಗಳ ಹಿಂದಿನ ಕಿಂಡಿ ಆಣೆಕಟ್ಟಿನ ಸ್ಲ್ಯಾಬ್ ಮುರಿದು ಬಿದ್ದು ದಂಪತಿ ಗಾಯಗೊಂಡ ಘಟನೆ ಸುಳ್ಯದ ಅರಂತೋಡು ಗ್ರಾಮದ ದೇರಾಜೆ ಸಮೀಪ ಕಳುಬೈಲು ಎಂಬಲ್ಲಿ ನಡೆದಿದೆ.

ದೇರಾಜೆ ಕಳುಬೈಲು ನಿವಾಸಿ ಚಂದ್ರಪ್ರಕಾಶ್ ಹಾಗೂ ಅವರ ಪತ್ನಿ ವೇದಾವತಿ ಗಾಯಗೊಂಡ ದಂಪತಿಗಳಾಗಿದ್ದಾರೆ. ಇವರಿಬ್ಬರು ತಮ್ಮ ರಬ್ಬರ್ ತೋಟಕ್ಕೆ ಕೆಲಸಕ್ಕೆ ಹೋಗಿ ಮರಳಿ ಈ ಕಿಂಡಿ ಆಣೆಕಟ್ಟಿನ ಮೂಲಕ ನಡೆದು ಬರುತ್ತಿದ್ದ ಸಂದರ್ಭ ಆಣೆಕಟ್ಟಿನ ಸ್ಲ್ಯಾಬ್ ಏಕಾಏಕಿ ಮುರಿದು ಬಿದ್ದಿದೆ.

ಈ ವೇಳೆ ಅವರಿಬ್ಬರು ಸುಮಾರು 15 ಅಡಿಗಳ ಆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಅವರನ್ನು ಅಲ್ಲಿಂದ ಮೇಲೆತ್ತಿ ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದ ವೇದಾವತಿಯವರ ಕಾಲು ಮುರಿತವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಂದ್ರಪ್ರಕಾಶರವರು ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!