Wednesday, April 2, 2025
spot_imgspot_img
spot_imgspot_img

ಸುಳ್ಯ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪ್ರಸಾರ..

- Advertisement -
- Advertisement -

ನಾಟೌಟ್‌ ಸಂಪಾದಕ ಹೇಮಂತ್‌ ಸಂಪಾಜೆ ವಿರುದ್ಧ ಪ್ರಕರಣ ದಾಖಲು..!

ಸುಳ್ಯ: ಧರ್ಮ ಧರ್ಮಗಳ ನಡುವಿನ ಕೋಮು ಸಾಮರಸ್ಯ ಕೆಡಿಸುವ ರೀತಿ ಖಾಸಗಿ ಮಾಧ್ಯಮವೊಂದರಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿರುವ ಬಗ್ಗೆ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ 20.03.2025 ರಂದು ರಾತ್ರಿ ಸಮಯ, ಸಂಪಾಜೆ ಗ್ರಾಮದ ಕಲ್ಲುಗುಂಡಿ ಬಳಿ ದನುಷ್‌ ಪಿ ಎಸ್‌ ಎಂಬಾತನು ಸುಳ್ಯ ಕಡೆಯಿಂದ ಕಲ್ಲುಗುಂಡಿ ಕಡೆಗೆ ತನ್ನ ಬಾಬ್ತು ಮಾರುತಿ ಒಮ್ನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಸುಳ್ಯ ಕಡೆಯಿಂದ ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದ ವ್ಯಕ್ತಿಗಳೊಂದಿಗೆ ತಕರಾರು ನಡೆದು ಮಾತಿನ ಚಕಮಕಿ ಉಂಟಾಗಿರುತ್ತದೆ.

ವಿಚಾರದ ಬಗ್ಗೆ ಸುಳ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಟೌಟ್‌ ಎಂಬ ವೆಬ್‌ ನ್ಯೂಸ್‌ ಸಾಮಾಜಿಕ ಮಾದ್ಯಮದಲ್ಲಿ, ಘಟನೆಯ ಬಗ್ಗೆ ಸರಿಯಾದ ಮಾಹಿತಿ ಪಡೆಯದೇ “ಹಿಂದು ಹುಡುಗಿಯರ ಜೊತೆ ಅನ್ಯ ಕೋಮಿನ ಯುವಕರು” “ಸಂಪಾಜೆ ತನಕ ತಡರಾತ್ರಿ ಕಾರನ್ನು ಬೆನ್ನಟ್ಟಿದ ಯುವಕ” ಎಂಬುದಾಗಿ ಮುಖ್ಯ ಶಿರ್ಷಿಕೆಯಲ್ಲಿ ಹಾಗೂ ವಿವರಣೆಯಲ್ಲಿ ಸಮಾಜದಲ್ಲಿ ಧರ್ಮ ಧರ್ಮಗಳ ಮದ್ಯೆ ಕೋಮು ಸಾಮರಸ್ಯ ಕೆಡುವ ರೀತಿಯಲ್ಲಿ ಘಟನೆಯನ್ನು ಬಿಂಬಿಸಿ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿರುತ್ತಾರೆ.

ಈ ಬಗ್ಗೆ ವೆಬ್‌ ನ್ಯೂಸ್‌ ನ ವರದಿಗಾರ ಮತ್ತು ಸಂಪಾದಕರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 41/25 ಕಲಂ:353 (2) BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!