Saturday, June 28, 2025
spot_imgspot_img
spot_imgspot_img

ಸುಳ್ಯ: ಮೂರು ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವ್ಯಕ್ತಿಯ ತಲೆ ಬುರುಡೆ ಹಾಗೂ ಬಟ್ಟೆ ಪತ್ತೆ

- Advertisement -
- Advertisement -

ಸುಳ್ಯ: ಮೂರು ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವೃದ್ಧರೊಬ್ಬರ ತಲೆ ಬುರುಡೆ ಹಾಗೂ ಬಟ್ಟೆ ಬಿದಿರಿನ ಪೊದೆಯಲ್ಲಿ ಪತ್ತೆಯಾಗಿರುವ ಘಟನೆ ಸೇವಾಜೆ ಎಂಬಲ್ಲಿ ನಡೆದಿದೆ.

ಸೆ. 9ರಂದು ಸೇವಾಜೆ ನಿವಾಸಿ ಬೆಳ್ಯಪ್ಪ ಗೌಡ (85) ಎಂಬವರು ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪುತ್ರ ನೀಡಿದ ದೂರಿನನ್ವಯ ದೂರು ದಾಖಲಾಗಿತ್ತು. ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಅವರು ಪತ್ತೆಯಾಗಿರಲಿಲ್ಲ.

ಬೆಳ್ಯಪ್ಪ ಗೌಡ ಅವರ ತಲೆ ಬುರುಡೆ ಮತ್ತು ಬಟ್ಟೆಯು ಮನೆಯಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿರುವ ಬಿದಿರಿನ ಪೊದೆಯಲ್ಲಿ ದೊರೆತಿದ್ದು, ಈ ಜಾಗದಲ್ಲಿ 3 ತಿಂಗಳ ಹಿಂದೆ ಹುಡುಕಾಟ ನಡೆಸಿದ್ದರೂ ಏನೂ ಪತ್ತೆಯಾಗಿರಲಿಲ್ಲ. ಹೀಗಾಗಿ ಅವರ ಸಾವು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

- Advertisement -

Related news

error: Content is protected !!