- Advertisement -
- Advertisement -
ಮಂಗಳೂರು:-ಇಂದು ‘ಸಂಡೇ ಲಾಕ್ ಡೌನ್’ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಸ್ತಬ್ಧ ವಾಗಿದೆ.ನಗರದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್, ಬಿಕೋ ಎನ್ನುತ್ತಿರುವ ಮಾರ್ಕೆಟ್ ಹಾಗೂ ಹಾಲು, ಮೆಡಿಕಲ್, ತುರ್ತು ಸೇವಾ ಕೇಂದ್ರಗಳಿಗಷ್ಟೇ ವಿನಾಯಿತಿ ನೀಡಲಾಗಿದೆ.


ಇಂದು ಜಿಲ್ಲೆಯಲ್ಲಿ ಬೆಳಿಗ್ಗೆ 11ರ ವರೆಗೆ ಹಾಲು ಖರೀದಿಗೆ ಅವಕಾಶವನ್ನು ನೀಡಲಾಗಿದೆ .ಮತ್ತು ಸಾರ್ವಜನಿಕರಿಗೆ ಅನವಾಶಕವಾಗಿ ಮಂಗಳೂರು ನಗರ ಪ್ರವೇಶಿಸಲು ನಿರ್ಬಂಧಿಸಲಾಗಿದೆ. ಹಾಗೂ ನಗರದ ಹಲವೆಡೆ ನಾಕಾಬಂಧಿ ವಿಧಿಸಿ ಬಂದೋಬಸ್ತು ಮಾಡಲಾಗಿದೆ. ಇಂದು ಜಿಲ್ಲೆಯಲ್ಲಿ ಅಗತ್ಯ ಸಾಮಗ್ರಿ ಖರೀದಿಗೆ ಇವತ್ತಿಲ್ಲ ಅವಕಾಶ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕನೇ ದಿನದ ಲಾಕ್ ಡೌನ್.


- Advertisement -