Sunday, June 7, 2026
spot_imgspot_img
spot_imgspot_img

ವಿವಾಹಿತ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಪತಿಯ ವಿರುದ್ಧ ಕೊಲೆ ಆರೋಪ

- Advertisement -
- Advertisement -

ವಿವಾಹಿತ ಮಹಿಳೆಯೋರ್ವರ ಶವ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತಿಯ ವಿರುದ್ಧ ಕುಟುಂಬಸ್ಥರರು ಕೊಲೆ ಆರೋಪ ಹೊರಿಸಿದ್ದಾರೆ. ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ರಶ್ಮಿ (32) ಸಾವಿಗೀಡಾದ ಮಹಿಳೆ. ಬೆಂಗಳೂರಿನ ಪೂರ್ಣಪ್ರಜ್ಞಾ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ರಶ್ಮಿ ತಾನು ವಾಸವಿದ್ದ ಮನೆಯ ಕೋಣೆಯಲ್ಲಿ ಶವವಾಗಿ ನೇತಾಡುತ್ತಿದ್ದ ಪರಿಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

ಮಂಡ್ಯ ಮೂಲದ ರಶ್ಮಿ ಮತ್ತು ಶ್ರೀರಂಗಪಟ್ಟಣದ ಅರವಿಂದ್‌ನನ್ನು ಮದುವೆ ಹತ್ತು ವರ್ಷಗಳ ಹಿಂದೆ ನಡೆದಿದ್ದು, ಅರವಿಂದ್‌ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದರು. ಈ ದಂಪತಿಗೆ ಐದು ವರ್ಷದ ಮಗ ಇದ್ದಾನೆ. ರಶ್ಮಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಇದು ಆತ್ಮಹತ್ಯೆಯ ಕೊಲೆಯ ಎಂಬುದು ಖಚಿತವಾಗಿಲ್ಲ. ಆದರೆ ಪತಿಯೇ ಪತ್ನಿಯನ್ನು ಕೊಲೆ ಮಾಡಿ ನೇತು ಹಾಕಿದ್ದಾನೆ ಎಂದು ರಶ್ಮಿ ಕುಟುಂಬಸ್ಥರು ಆರೋಪಿಸಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!