- Advertisement -
- Advertisement -



ಹೊಸದಿಲ್ಲಿ,: ಸ್ತನ ಹಿಡಿಯುವುದು ಹಾಗೂ ಪೈಜಾಮದ ದಾರವನ್ನು ಎಳೆಯುವುದು ‘ಅತ್ಯಾಚಾರ ಯತ್ನ’ಕ್ಕೆ ಸಮಾನವಾದ ಕೃತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದು ಕೇವಲ ‘ಅತ್ಯಾಚಾರಕ್ಕೆ ನಡೆಸಿದ ಸಿದ್ಧತೆ’ ಎಂಬ ಅಲಹಾಬಾದ್ ಉಚ್ಚ ನ್ಯಾಯಾಲಯದ ವಿವಾದಾತ್ಮಕ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್‌ಮಲ್ಯ ಬಾಗ್ಚಿ ಹಾಗೂ ಎನ್.ವಿ. ಅಂಜಾರಿಯ ಅವರನ್ನು ಒಳಗೊಂಡ ಪೀಠ, ಕ್ರಿಮಿನಲ್ ನ್ಯಾಯಶಾಸ್ತ್ರದ ಸ್ಥಿರ ತತ್ವಗಳ ತಪ್ಪಾದ ಅನ್ವಯದ ಕಾರಣದಿಂದಾಗಿ ಈ ಆಕ್ಷೇಪಾರ್ಹ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದೆ.
ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಇಬ್ಬರು ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣವನ್ನು ಮರು ದಾಖಲಿಸುವಂತೆ ಸೂಚಿಸಿತು.
- Advertisement -








