ಸುರತ್ಕಲ್: ಅಕ್ರಮ ಎನ್ ಐಟಿಕೆ ಟೋಲ್ ಗೇಟ್ ವಿರುದ್ದ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತರ ಆಸಿಫ್ ಅಪತ್ಭಾಂಧವ ಮೇಲೆ ಮಂಗಳಮುಖಿಯರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 6 ಮಂಗಳಮುಖಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ವಾಸವಿ ಗೌಡ (32), ಲಿಪಿಕಾ(19), ಹಿಮಾ(24), ಆದ್ಯ(22), ಮಾಯಾ(28), ಮೈತ್ರಿ(28) ಎನ್ನಲಾಗಿದೆ.
ಕಳೆದ ಮಧ್ಯರಾತ್ರಿ ಸುಮಾರು 12.30ರ ಸುಮಾರಿಗೆ ಮಂಗಳಮುಖಿಯರ ತಂಡ ಆಗಮಿಸಿ, ಪ್ರತಿಭಟನಾ ನಿರತರಿಗೆ ಅವಾಚ್ಯ ಶಬ್ಧಗಳಿಂದ ಬೈಯ್ದು, ಹಲ್ಲೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಕೂಡಲೇ ಆಸಿಫ್ ಆಪತ್ಭಾಂಧವ ಫೇಸ್ ಬುಕ್ ಲೈವ್ ವಿಡಿಯೋ ಮಾಡಿದ್ದಾರೆ. ತಂಡದಲ್ಲಿದ್ದ ಹಲವು ಮಂಗಳಮುಖಿಯರು ಬಟ್ಟೆ ಎತ್ತಿ ನರ್ತನ ಪ್ರಾರಂಭಿಸಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಪ್ರತಿಭಟನಾ ವೇದಿಕೆಯನ್ನು ನಾಳೆಯೇ ಒದ್ದು ಉರುಳಿಸುತ್ತೇವೆ. ನಿಮ್ಮನ್ನು ಇಲ್ಲಿಂದ ಓಡಿಸುತ್ತೇವೆ. ನಿಮ್ಮನ್ನು ನಾಳೆ ಸುರತ್ಕಲ್ ಪೊಲೀಸ್ ಸ್ಟೇಷನ್ ನಲ್ಲಿ ಕೂರಿಸುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ದೂರಲಾಗಿದೆ