Sunday, May 12, 2024
spot_imgspot_img
spot_imgspot_img

ಸುರತ್ಕಲ್‌: ಸಹಕಾರ ಸಂಘಗಳಲ್ಲಿ ವನ್‌ ಗ್ರಾಂ ಚಿನ್ನವನ್ನು ಅಡವಿಟ್ಟು ವಂಚಿಸಿದ ಮೂವರು ಆರೋಪಿಗಳ ಬಂಧನ..!

- Advertisement -G L Acharya panikkar
- Advertisement -

ಸುರತ್ಕಲ್‌: ಕಳ್ಳರ ತಂಡವೊಂದು ಈ ವನ್‌ ಗ್ರಾಂ ಚಿನ್ನವನ್ನೇ ಸಹಕಾರಿ ಬ್ಯಾಂಕ್‌ನಲ್ಲಿರಿಸಿ 4.91 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ ಘಟನೆ ನಡೆದಿತ್ತು. ಇದೀಗ ಈ . ಪ್ರಕರಣದ ಇಡೀ ಜಾಲವನ್ನು ಭೇಧಿಸಿದ ಪೊಲೀಸರು ಮೂವರನ್ನು ಆರೋಪಿಗಳನ್ನು ವಶಕ್ಕಾಡ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ತಮಿಳುನಾಡು ದಿಂಡಿಗಲ್‌ ಮೂಲದ ಪನ್ನೀರ್‌ ಸೆಲ್ವಂ(53), ಸುರತ್ಕಲ್‌ ಜನತಾ ಕಾಲೊನಿ ನಿವಾಸಿ ತಮಿಳುನಾಡು ಮೂಲದ ಮಹಮ್ಮದ್‌ ಮುಸ್ತಾಫಾ(34) ಹಾಗೂ ಜನತಾ ಕಾಲೊನಿ ನಿವಾಸಿ ಶಮೀಮಾ(32) ಎಂದು ಗುರುತಿಸಲಾಗಿದೆ.

ಸಹಕಾರ ಸಂಘಗಳು, ಖಾಸಗಿ ಹಣಕಾಸು ಸಂಸ್ಥೆಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಬೆಚ್ಚಿ ಬೀಳಿಸಿದ್ದ ಈ ಪ್ರಕರಣ ಹಲವು ವರ್ಷಗಳ ಹಿಂದೆ ನಡೆದಿದ್ದು, ಪ್ರಸ್ತುತ ಈ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ಸಹಕಾರ ಸಂಘಗಳಲ್ಲಿ ಅಡವರಿಸಿದ ಚಿನ್ನ 6 ತಿಂಗಳಲ್ಲಿ ಮರುಪರಿಶೀಲನೆ ನಡೆಸಬೇಕು ಎಂಬ ನಿಯಮವಿದ್ದು ಸೊಸೈಟಿಯವರು ಬಳೆ ಕತ್ತರಿಸಿ ನಕಲಿ ಚಿನ್ನಾಭರಣ ಮರು ಪರಿಶೀಲನೆ ನಡೆಸಿದಾಗ ವಂಚನೆ ಬೆಳಕಿಗೆ ಬಂದಿದೆ. ಇವರು ಬಳಸಿದ್ದು ವನ್‌ ಗ್ರಾಂ ಚಿನ್ನದ ಬಳೆಯಾಗಿದ್ದರೂ ಸಾಲ ನೀಡುವ ಮೊದಲು ಸರಾಫರ ಪರಿಶೀಲನೆಗೆ ಸಿಗಲಿಲ್ಲ.

ಆರೋಪಿಗಳನ್ನು 2019ರ ಅ.28ರಂದು ಬಂಧಿಸಲಾಗಿತ್ತು. ಬಳಿಕ ಕೋವಿಡ್‌ ಇತ್ಯಾದಿ ಕಾರಣಕ್ಕೆ ಈ ಪ್ರಕರಣದ ತನಿಖೆಯಲ್ಲಿ ವಿಳಂಬವಾಗಿತ್ತು. 2019ರಲ್ಲಿ ಪ್ರಕರಣ ದಾಖಲಾಗಿದ್ದು ಅವರನ್ನು ಸುರತ್ಕಲ್‌ ಠಾಣೆಯ ಅಂದಿನ ಠಾಣಾಧಿಕಾರಿಗಳಾಗಿದ್ದ ಕೆ ಕೆ ರಾಮಕೃಷ್ಣ ಅವರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಆರೋಪಿಗಳು ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅವರ ವಿರುದ್ಧ ಸುರತ್ಕಲ್‌ ಠಾಣೆ ಎಸ್‌ಐ ಅರುಣ್‌ ಕುಮಾರ್‌ 2022ರ ಜು.22ರಂದು ಚಾರ್ಜ್ ಶೀಟ್ ಸಲ್ಲಿಸಿದ್ದರು.

ದಿಂಡಿಗಲ್‌ನಲ್ಲಿ ತಯಾರಾಗುತ್ತಿದ್ದ ಭಾರಿ ಗಾತ್ರದ ವನ್‌ ಗ್ರಾಂ ಚಿನ್ನದ ಬಳೆಗಳನ್ನು ಬ್ಯಾಂಕ್‌ ಹಣಕಾಸು ಸಂಸ್ಥೆ ಸೊಸೈಟಿಗಳಿಗೆ ಅಡವಿರಿಸಿ ವಂಚಿಸಲು ಬಳಕೆಯಾಗಿತ್ತು. ಇದಕ್ಕೆ ಅವರ ಸಂಪರ್ಕಕ್ಕೆ ಇಬ್ಬರನ್ನು ಸೇರಿಸಿಕೊಂಡಿದ್ದರು. ಮುಸ್ತಾಫಾ ಬಳಸಿಕೊಂಡಿದ್ದು ತನ್ನ ಸಂಬಂಧಿ ಶಮೀಮಾಳನ್ನು. ಶಮೀಮಾ ಇದೇ ಉದ್ದೇಶಕ್ಕಾಗಿ ಸ್ವಸಹಾಯ ಸಂಘವೊಂದರ ಸದಸ್ಯೆಯಾಗಿದ್ದು ಆ ಮೂಲಕ ಸೊಸೈಟಿ ಹಣಕಾಸು ಸಂಸ್ಥೆ, ಬ್ಯಾಂಕ್‌ನವರ ವಿಶ್ವಾಸ ಪಡೆಕೊಂಡಿದ್ದರು. ಇದೇ ತಂಡ ಸುರತ್ಕಲ್‌ನ ರಾಷ್ಟ್ರೀಕೃತ ಬ್ಯಾಂಕ್‌ನ ಶಾಖೆಯೊಂದರಲ್ಲಿ ಚಿನ್ನದ ಬಳೆ ಅಡವಿರಿಸಿ ಸಾಲ ಪಡೆದಿತ್ತು. ಬ್ಯಾಂಕ್‌ನವರು ನಕಲಿ ಚಿನ್ನದ ಬಳೆ ಏಲಂ ನಡೆಸಿದ್ದು ಏಲಂ ವಹಿಸಿಕೊಂಡವರು ನಷ್ಟಕ್ಕೆ ತುತ್ತಾಗಿದ್ದರು.

ಆರೋಪಿಗಳು ಎಷ್ಟು ಖತರ್ನಾಕ್‌ ಆಗಿದ್ದರೆಂದರೆ ನಕಲಿ ಚಿನ್ನ ಅಡವಿರಿಸಿ 4 ಬಾರಿ ಸಾಲ ಪಡೆದಿದ್ದರು. ಇಷ್ಟಾದರೂ ಬ್ಯಾಂಕ್‌ ಸಿಬ್ಬಂದಿಗೆ ಗೊತ್ತೇ ಆಗಿಲ್ಲ. 2019ರ ಮೇ 8ರಂದು ಸುರತ್ಕಲ್‌ನ ಸಹಕಾರಿ ಸಂಘಕ್ಕೆ ಆಗಮಿಸಿದ್ದ ಮುಸ್ತಫಾ ಮತ್ತು ಅದೇ ಸಹಕಾರ ಸಂಘದಲ್ಲಿ ಸದಸ್ಯೆಯಾಗಿದ್ದ ಶಮೀಮಾ ಚಿನ್ನದ ನಕಲಿ ಬಳೆ ಅಡವಿರಿಸಿ 1.7 ಲಕ್ಷ ರೂಪಾಯಿಸಾಲ ಪಡೆದಿದ್ದರು. ಇದೇ ತಂಡ 2019ರ ಮೇ 28ರಂದು ಅದೇ ಸಹಕಾರ ಸಂಘದಿಂದ ಪುನಃ 8 ನಕಲಿ ಚಿನ್ನದ ಬಳೆ ಅಡವಿರಿಸಿ 1.6 ಲಕ್ಷ ರೂಪಾಯಿಸಾಲ ಪಡೆದಿದ್ದರು. ಒಟ್ಟು 160.6 ಗ್ರಾಂ ನಕಲಿ ಚಿನ್ನ ಅಡವಿರಿಸಿ 3.3 ಲಕ್ಷ ರೂಪಾಯಿಸಾಲ ಪಡೆದಿದ್ದರು. ಇದೇ ತಂಡ 2019ರ ಮೇ 9ರಂದು ಸುರತ್ಕಲ್‌ನ ಖಾಸಗಿ ಹಣಕಾಸು ಕಂಪನಿಯಲ್ಲಿನಕಲಿ ಚಿನ್ನದ 6 ಬಳೆ ಅಡವಿರಿಸಿ 1,31,500 ರೂಪಾಯಿಸಾಲ ಪಡೆದಿದ್ದರು ಹಾಗೂ 2019ರ ಮೇ 28ರಂದು 8 ನಕಲಿ ಚಿನ್ನದ ಬಳೆ ಅಡವಿರಿಸಿ 1,75,294 ರೂಪಾಯಿಸಾಲ ಪಡೆದಿದ್ದರು (ಒಟ್ಟು 220.4 ಗ್ರಾಂ ಚಿನ್ನ, ಸಾಲ 4.91,781).

- Advertisement -

Related news

error: Content is protected !!