


ಮಾಣಿ : ಬದ್ರಿಯಾ ಜುಮ್ಮಾ ಮಸೀದಿ ಸೂರಿಕುಮೇರು ಇದರ ವಾರ್ಷಿಕ ಮಹಾಸಭೆ ಶುಕ್ರವಾರ ಮದ್ರಸಾ ಹಾಲ್ ನಲ್ಲಿ ನಡೆಯಿತು. ಅಧ್ಯಕ್ಷ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ಅಮೀರುದ್ದೀನ್ ಮತ್ತು ಜೊತೆ ಕಾರ್ಯದರ್ಶಿ ಕರೀಂ ನೆಲ್ಲಿ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು,ಖತೀಬ್ ಹಸೈನಾರ್ ಸಅದಿ ಪೆರ್ಲ ದುಆ ನೆರವೇರಿಸಿದರು,ಸಭೆಯ ಅನುಮೋದನೆ ಪಡೆದು ಹಾಲಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ರಚಿಸಲಾಯಿತು, ಅದರಂತೆ ಅಧ್ಯಕ್ಷರಾಗಿ ಎಸ್ ಎ ಇಸ್ಮಾಯಿಲ್,ಉಪಾಧ್ಯಕ್ಷರಾಗಿ ಹಂಝ ಕಾಯರಡ್ಕ,ಪ್ರಧಾನ ಕಾರ್ಯದರ್ಶಿಯಾಗಿ ಅಮೀರುದ್ದೀನ್,ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಆದರ್ಶ ಮಾಣಿ,ಮತ್ತು ಮೂಸಾ ಕರೀಂ ಮಾಣಿ,ಕೋಶಾಧಿಕಾರಿಯಾಗಿ ಹಾಜಿ ಅಬ್ದುಲ್ ಹಮೀದ್ ನೆಲ್ಲಿ,ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ,ಯೂಸುಫ್ ಹಾಜಿ ಸೂರಿಕುಮೇರು, ಅಝೀಂ ನೆಲ್ಲಿ ,ಮುಹಮ್ಮದಾಲಿ ಮುಸ್ಲಿಯಾರ್,ಅಬ್ದುಲ್ ರಹ್ಮಾನ್ ಪುತ್ತು,ಬಶೀರ್ ಮಾಣಿ,ಅಬ್ದುಲ್ ಖಾದರ್ ಮಾಣಿ,ಇಬ್ರಾಹಿಂ ನೆಲ್ಲಿ, ಅಬ್ದುಲ್ ಲತೀಫ್ ಗುಡ್ಡೆ,ನಾಸೀರ್ ಬದ್ರಿಯಾ ಗ್ರೌಂಡ್, ಸುಲೈಮಾನ್ ಕುಕ್ಕಿಲ ಆಯ್ಕೆಯಾದರು ಚುನಾವಣಾ ವೀಕ್ಷಕರಾಗಿ ಹಾಜಿ ಮುಹಮ್ಮದ್ ಬಂಡಾಡಿ,ಮತ್ತು ಎಸ್ ಎ ಉಮ್ಮರ್ ಕಾರ್ಯ ನಿರ್ವಹಿಸಿದರು.








