Wednesday, April 16, 2025
spot_imgspot_img
spot_imgspot_img

ಕಾಂತಾರ ಚಿತ್ರದಲ್ಲಿ ಗುರುವ ಪಾತ್ರದಲ್ಲಿ ಕಾಣಿಸಿಕೊಂಡ ಸ್ವರಾಜ್ ಶೆಟ್ಟಿಯವರು ಇದೀಗ ಬೇರ ಚಿತ್ರದಲ್ಲಿ

- Advertisement -
- Advertisement -
vtv vitla

ಗುರುವ ಪಾತ್ರದ ಮೂಲಕ ಜನರ ಮನಸೆಳೆದ ಸ್ವರಾಜ್ ಶೆಟ್ಟಿಯವರು ಬೇರ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಮಂಗಳೂರಿನಲ್ಲೇ ಹುಟ್ಟಿ ಬೆಳೆದ ಇವರು ಹಲವಾರು ತುಳು ಸಿನಿಮಾದಲ್ಲಿ ನಟಿಸಿದ್ದಾರೆ. ನಟನೆ ರಂಗಕ್ಕೆ ಕಾಲಿಟ್ಟು ಇದಾಗಲೇ ಹನ್ನೆರಡು ವರ್ಷ ಕಳೆದಿದೆ. ನಾಯಕ ನಟನಾಗಿ ಕೃಷ್ಣ ತುಳಸಿ ಧಾರವಾಹಿಯಲ್ಲಿ ನಟಿಸಿದ್ದಾರೆ. ಖಳನಾಯಕನಾಗಿ ರಾಧಾ ಕಲ್ಯಾಣದಲ್ಲಿ ಹಾಗೂ ಅಣ್ಣ ತಂಗಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಓಂ ಪ್ರಕಾಶ್ ನಿರ್ಮಾಣದ ಹುಚ್ಚ 2 ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದಾರೆ. ಕಾಂತಾರ ಚಿತ್ರದಲ್ಲಿ ಗುರುವ ಪಾತ್ರದಲ್ಲಿ ಅತ್ಯದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಇವರು ಕನ್ನಡ ಚಿತ್ರದಲ್ಲಿ ಮಾತ್ರವಲ್ಲ, ತುಳು, ತಮಿಳ್ ಚಿತ್ರದಲ್ಲೂ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ ಅವರ ಒಂದು ಮೊಟ್ಟೆಯ ಕಥೆ ಮತ್ತು ತುಳುನಾಡಿನ ಯಶಸ್ವಿ ನಾಟಕವಾದ ಶಿವದೂತ ಗುಳಿಗೆ ನಾಟಕದ ಗುಳಿಗನ ಪಾತ್ರದಲ್ಲಿ ನಟಿಸಿದ್ದಾರೆ. ಬರ್ಕೆ, ಮಾಜಿ ಮುಖ್ಯಮಂತ್ರಿ, ಜೈ ಮಾರುತಿ ಯುವಕ ಮಂಡಲ, ಪಿಳಿ, ಪುಳಿಮುಂಚಿ ಮುಂತಾದ ತುಳು ಸಿನಿಮಾದಲ್ಲಿ ನಟಿಸಿದ್ದಾರೆ.

ಇದೀಗ ಇವರು ಬೇರ ಚಿತ್ರದಲ್ಲಿ ಒಂದು ವಿಭಿನ್ನ ಪಾತ್ರದ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಇವರಿಗೆ ಜೋಡಿಯಾಗಿ ಹರ್ಷಿಕಾ ಪೂಣಚ್ಚ ಅವರು ನಟಿಸಿದ್ದಾರೆ.

- Advertisement -

Related news

error: Content is protected !!