Wednesday, May 1, 2024
spot_imgspot_img
spot_imgspot_img

ರಾಜಕೀಯಕ್ಕೆ ತಮಿಳು ನಟ ದಳಪತಿ ವಿಜಯ್ ಎಂಟ್ರಿ

- Advertisement -G L Acharya panikkar
- Advertisement -

ತಮಿಳು ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ವಿಜಯ್ ತಮ್ಮ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ತಮ್ಮ ಹೊಸ ಪಕ್ಷಕ್ಕೆ ತಮಿಳಗ ವೆಟ್ರಿ ಕಳಗಂ’ ಎಂದು ನಾಮಕರಣ ಮಾಡಿದ್ದು, 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ‘ತಮಿಳಗ ವೆಟ್ರಿ ಕಳಗಂ’ ಎಂದರೆ ‘ತಮಿಳುನಾಡು ವಿಜಯ ಪಕ್ಷ’ ಎಂದರ್ಥ. ರಾಜಕೀಯವು ಮತ್ತೊಂದು ಮನರಂಜನಾ ತಾಣವಲ್ಲ, ಪವಿತ್ರ ಸಾಮಾಜಿಕ ಸೇವೆ ಎಂದಿದ್ದಾರೆ.

‘ತಮ್ಮ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಜತೆಗೆ ಯಾವ ಪಕ್ಷವನ್ನೂ ಬೆಂಬಲಿಸುತ್ತಿಲ್ಲ. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳ ಕೆಲಸವನ್ನು ಮುಗಿಸಿದ ಬಳಿಕ, ಸಂಪೂರ್ಣವಾಗಿ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. ಈ ಪಕ್ಷ ಸ್ಥಾಪನೆ ತಮಿಳುನಾಡಿನ ಜನತೆಗೆ ಸಲ್ಲಿಸುವ ಕೃತಜ್ಞತೆಯಾಗಿದೆ’ ಎಂದು ವಿಜಯ್‌ ಹೇಳಿದ್ದಾರೆ.

- Advertisement -

Related news

error: Content is protected !!