- Advertisement -
- Advertisement -
ತಮಿಳುನಾಡು: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಚೆನ್ನೈನ ರಾಜ ಭವನದಲ್ಲಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಅವರು ತಮಿಳು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಇದರ ಜೊತೆಗೆ ಹಿರಿಯ ನಾಯಕರು ಹಾಗೂ ಒಂದು ಡಜನ್ಗೂ ಹೆಚ್ಚು ಮೊದಲ ಬಾರಿಗೆ ಸಚಿವರಾಗುತ್ತಿರುವ 34 ಸದಸ್ಯರ ಕ್ಯಾಬಿನೆಟ್ನ ಪಟ್ಟಿಯನ್ನು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅನುಮೋದಿಸಿದ್ದಾರೆ ಎಂದು ರಾಜ ಭವನ ಪ್ರಕಟಣೆ ತಿಳಿಸಿದೆ.



- Advertisement -