Sunday, June 21, 2026
spot_imgspot_img
spot_imgspot_img

ಉಡುಪಿ: ಕೆಲಸಕ್ಕೆಂದು ಹೋದ ಮಹಿಳೆ ವಾಪಾಸು ಮನೆಗೆ ಬಾರದೇ ನಾಪತ್ತೆ..!

- Advertisement -
- Advertisement -

ಉಡುಪಿ: ಮಣಿಪಾಲದಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಮಹಿಳೆಯೋರ್ವರು ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ಮಹಿಳೆಯನ್ನು ಉಡುಪಿ ತಾಲೂಕು ಪುತ್ತೂರು ಗ್ರಾಮದ ಕೊಡಂಕೂರಿನಲ್ಲಿ ವಾಸವಿದ್ದ ಮಾದೇವಿ (38) ಎಂದು ಗುರುತಿಸಲಾಗಿದೆ.

ಮಾದೇವಿ ಎಂಬ ಮಹಿಳೆ ಜೂನ್ 14 ರಂದು ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದವರು, ಕೆಲಸಕ್ಕೂ ಹೋಗದೇ, ಸಂಬಂಧಿಕರ ಮನೆಗೂ ತೆರಳದೇ, ವಾಪಾಸು ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ.

5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ಉತ್ತರ ಕರ್ನಾಟಕ ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್‌ ಠಾಣಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!