Friday, July 10, 2026
spot_imgspot_img
spot_imgspot_img

‘ನಾನೇ ನಂಬರ್​ 1 ಟಾರ್ಗೆಟ್​​’, ಇರಾನ್​ ಮೇಲೆ ಗಂಭೀರ ಆರೋಪ ಮಾಡಿದ ಡೊನಾಲ್ಡ್ ಟ್ರಂಪ್​!

- Advertisement -
- Advertisement -

ಇಷ್ಟು ದಿನ ತಣ್ಣಗಾಗಿದ್ದ ಇರಾನ್​ ಅಮೆರಿಕ ಸಂಘರ್ಷ ಮತ್ತೆ ಜೋರಾಗಿದೆ. ಡೊನಾಲ್ಡ್​ ಟ್ರಂಪ್ ಇರಾನ್​ ಜೊತೆಗಿನ ಕದನ ವಿರಾಮ ಅಂತ್ಯ ಎಂದು ಹೇಳಿ ಮತ್ತೆ ಅಟ್ಯಾಕ್​ ಮಾಡಲು ಶುರುಮಾಡಿದ್ದಾರೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ದೊಡ್ಡ ಹೇಳಿಕೆ ನೀಡಿದ್ದಾರೆ. ಯುದ್ಧದ ಜೊತೆಗೆ ಇರಾನ್​ ಮೇಲೆ ಒಂದು ಗಂಭೀರ ಆರೋಪ ಮಾಡಿದ್ದಾರೆ. ಇರಾನ್ ತನ್ನನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಿರಬಹುದು ಎಂದು ಟ್ರಂಪ್​ ಹೇಳಿಕೆ ನೀಡಿದ್ದಾರೆ.

ತುರ್ಕಿಯ ರಾಜಧಾನಿ ಅಂಕಾರಾದಲ್ಲಿ ನಡೆದ ನ್ಯಾಟೋ ಶೃಂಗಸಭೆಯ ಹೊರಗೆ ಮಾತನಾಡುತ್ತಾ ಟ್ರಂಪ್, ತಾನು ಇರಾನ್‌ನ ‘ನಂಬರ್ ಒನ್ ಗುರಿ’ ಎಂದು ಹೇಳಿದರು. ಈ ಮೂಲಕ ಅವರು ನನ್ನ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ ಎಂದರು.

ನಾನೇ ಇರಾನ್​​ಗೆ ನಂ.1 ಟಾರ್ಗೆಟ್​​ ಎಂದ ಟ್ರಂಪ್​!
ಇರಾನ್ ನಾಯಕತ್ವದ ಒಳಗಿನ ಕೆಲವು ಅಂಶಗಳು ತನ್ನ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಟ್ರಂಪ್​ ಹೇಳಿದ್ದಾರೆ. ಟ್ರಂಪ್ ಇರಾನ್ ಹಿಂದಿನ ನಾಯಕತ್ವವನ್ನು ಬಹಳ ಕೆಟ್ಟದಾಗಿ ಬಣ್ಣಿಸಿದ್ದಾರೆ. ‘ಅವರು ಕೊಳಕು. ಅವರು 47 ವರ್ಷಗಳಿಂದಲೂ ಅದನ್ನೇ ಮಾಡುತ್ತಿದ್ದಾರೆ’ ಎಂದು ಹೇಳಿದರು. ಆದರೆ ಪ್ರಸ್ತುತ ಇರಾನ್ ನಾಯಕರು ಹೆಚ್ಚು ತರ್ಕಬದ್ಧವಾಗಿ ವರ್ತಿಸುತ್ತಿರುವಂತೆ ಕಾಣುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

- Advertisement -

Related news

error: Content is protected !!