Thursday, May 2, 2024
spot_imgspot_img
spot_imgspot_img

ಸಾಧನೆಗೆ ಯಾವ ವಯಸ್ಸಿನ ಮಿತಿಯೂ ಇಲ್ಲ ಎಂಬಂತೆ ಈಜಿನಲ್ಲಿ ಸಾಧನೆ ಮಾಡಿದ 47 ವರ್ಷದ ತೆಲಂಗಾಣದ ಮಹಿಳೆ

- Advertisement -G L Acharya panikkar
- Advertisement -

ತೆಲಂಗಾಣ: 40 ವರ್ಷ ದಾಟಿತು ಅಂದ್ರೆ ಸಾಕು ಆರೋಗ್ಯವನ್ನು ಕಾಪಾಡಿಕೊಳ್ಳೋದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತೆ. ಹೀಗಾಗಿಯೇ ಬಹುತೇಕ ಮಂದಿ ಈ ವಯಸ್ಸಿಗೆ ಬರ್ತಿದ್ದಂತೆ ನಿವೃತ್ತಿ ಜೀವನದ ಬಗ್ಗೆ ಯೋಚನೆ ಮಾಡೋಕೆ ಶುರು ಮಾಡ್ತಾರೆ.

ಆದರೆ ಈ ಎಲ್ಲಾ ಮಾತಿಗೆ ವಿರುದ್ಧವಾಗಿ ನಿಂತ 47 ವರ್ಷದ ಶ್ಯಾಮಲಾ ಗೋಲಿ ಎಂಬ ತೆಲಂಗಾಣದ ಮಹಿಳೆ ಪಾಲ್ಕ್​ ಸ್ಟ್ರೇಟ್​ (ರಾಮ್​ ಸೇತು)ನಲ್ಲಿ 13 ಗಂಟೆ 47 ನಿಮಿಷಗಳ ಸಮಯದಲ್ಲಿ 30 ಕಿಲೋಮೀಟರ್​ ಈಜಿ ಸಾಧನೆ ಮಾಡಿದ್ದಾರೆ. ಬುಲಾ ಚೌಧರಿಯ ದಾಖಲೆಯನ್ನು ಪುಡಿ ಮಾಡಿದ ಶ್ಯಾಮಲಾ ರಾಮ್​ ಸೇತುವಿನಲ್ಲಿ ಈಜಿದ ದೇಶದ ಎರಡನೇ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಶ್ಯಾಮಲಾ, ನಾನು ಕಳೆದ ವರ್ಷವೇ ಈ ಸಾಧನೆಯನ್ನು ಮಾಡೋಕೆ ಎಲ್ಲಾ ರೀತಿಯ ತಯಾರಿಯನ್ನು ಮಾಡಿದ್ದೆ. ಅದರೆ ಕೊರೊನಾ ವೈರಸ್​ನಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಲಾಕ್​ಡೌನ್ , ಕೊರೊನಾ ಮಾರ್ಗಸೂಚಿಗಳ ಕಾರಣದಿಂದಾಗಿ ನನಗೆ ಅನುಮತಿ ಸಿಗೋದು ವಿಳಂಬವಾಯ್ತು. ಆದರೆ ಈ ವರ್ಷ ನಾನು ಈಜಲು ಅನುಮತಿ ಪಡೆದೆ. ನನ್ನ ಕೋಚ್ ಹಾಗೂ ಹಿರಿಯ ಐಪಿಎಸ್​ ಅಧಿಕಾರಿ ರಾಜೀವ್​ ತ್ರಿವೇದಿ ನನಗೆ ತುಂಬಾನೇ ಸಹಾಯ ಮಾಡಿದ್ರು ಎಂದು ಹೇಳಿದ್ದಾರೆ.

- Advertisement -

Related news

error: Content is protected !!