Monday, June 30, 2025
spot_imgspot_img
spot_imgspot_img

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸ್ಟಾಲಿನ್ ಪತ್ನಿ! ದೇವಿಗೆ ಚಿನ್ನದ ಕಿರೀಟ ಸಮರ್ಪಣೆ

- Advertisement -
- Advertisement -

ಉಡುಪಿ: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರು ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಭೇಟಿ ನೀಡಿದ್ದರು. ಶುಕ್ರವಾರ ತಮ್ಮ ಸ್ನೇಹಿತೆಯರ ಜೊತೆ ದೇಗುಲಕ್ಕೆ ಬಂದ ದುರ್ಗಾ ಸ್ಟಾಲಿನ್, ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದರು.ಈ ವೇಳೆ ದುರ್ಗಾ ಸ್ಟಾಲಿನ್ ಅವರ ಜೊತೆಗೆ ಬಂದಿದ್ದ ಸ್ನೇಹಿತೆಯೊಬ್ಬರು ಮೂಕಾಂಬಿಕೆಗೆ ಹರಕೆ ರೂಪದಲ್ಲಿ ಚಿನ್ನದ ಕಿರೀಟ ಅರ್ಪಣೆ ಮಾಡಿದ್ದಾರೆ. ಖಾಸಗಿಯಾಗಿ ದೇವಿಗೆ ಕಿರೀಟ ಅರ್ಪಿಸಿ ಆಶೀರ್ವಾದ ಪಡೆದು, ದುರ್ಗಾ ಸ್ಟಾಲಿನ್ ಹಾಗೂ ಗೆಳತಿಯರು ತೆರಳಿದ್ದಾರೆ.

ಈ ವೇಳೆ ದೇಗುಲದ ವತಿಯಿಂದ ತಮಿಳುನಾಡು ಸಿಎಂ ಪತ್ನಿಗೆ ಗೌರವ ಸಲ್ಲಿಸಲಾಯ್ತು.ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಹಾಗೂ ಅವರ ಪುತ್ರ, ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಇಬ್ಬರೂ ಕೂಡ ಹಿಂದೂ ಧರ್ಮ, ಸನಾತನ ಸಂಸ್ಕೃತಿ ಬಗ್ಗೆ ಆಗಾಗ ಟೀಕೆ ಮಾಡುತ್ತಾ, ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಇರುತ್ತಾರೆ. ಆದರೆ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರೇ ಪಕ್ಕಾ ದೈವಭಕ್ತೆ!ಈ ಹಿಂದೆಯೂ ದುರ್ಗಾ ಸ್ಟಾಲಿನ್ ಅವರು ಅನೇಕ ದೇಗುಲಗಳಿಗೆ ಭೇಟಿ ನೀಡಿದ್ದರು. ಅದರಲ್ಲೂ ಕೊಲ್ಲೂರು ಮೂಕಾಂಬಿಕೆಯ ಭಕ್ತೆಯಾಗಿದ್ದಾರಂತೆ ದುರ್ಗಾ ಸ್ಟಾಲಿನ್. ಒಂದೆಡೆ ಅವರ ಪುತ್ರ ಉದಯ ನಿಧಿ ಸ್ಟಾಲಿನ್ ನಿರಂತರ ಸನಾತನ ಟೀಕೆ ಮಾಡುತ್ತಲೇ ಇರುತ್ತಾರೆ. ಆದರೆ ಪತಿ ಹಾಗೂ ಮಗನ ವಿಚಾರಧಾರೆಯಿಂದ ಅಂತರ ಕಾಯ್ದುಕೊಂಡ ದುರ್ಗಾ ಸ್ಟಾಲಿನ್, ನಿರಂತರವಾಗಿ ದೇಗುಲಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ದಕ್ಷಿಣ ಭಾರತದ ವಿವಿಧ ದೇಗುಲ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುತ್ತಲೇ ಇರುತ್ತಾರೆ.

- Advertisement -

Related news

error: Content is protected !!