- Advertisement -
- Advertisement -
ಭೋಪಾಲ್: ಹಾಡಹಗಲೇ 12 ವರ್ಷದ ಬಾಲಕನೋರ್ವ ಬ್ಯಾಂಕ್ ನಿಂದ ಕೇವಲ 10 ಸೆಕೆಂಡ್ ನಲ್ಲಿ ಬರೋಬ್ಬರಿ 10 ಲಕ್ಷ ರೂ. ದೋಚಿ ಪರಾರಿಯಾಗಿದ್ದಾನೆ. ಮಧ್ಯಪ್ರದೇಶದ ನಿಮಚ್ ಜಿಲ್ಲೆಯ, ಜಿಲ್ಲಾ ಸಹಕಾರಿ ಕೇಂದ್ರೀಯ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದೆ.
ನಿನ್ನೆ ಮಧ್ಯಾಹ್ನ ವೇಳೆ ಬ್ಯಾಂಕ್ ನಲ್ಲಿ ಹೆಚ್ಚು ಗ್ರಾಹಕರಿದ್ದರು. ಇದರಿಂದ ಅಲ್ಲಿನ ಸಿಬ್ಬಂದಿ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಬ್ಯಾಂಕ್ ಒಳಗೆ ಪ್ರವೇಶಿಸಿದ ಈ ಚೋರ ಕ್ಷಣಮಾತ್ರದಲ್ಲಿ ಕ್ಯಾಶ್ ಕೌಂಟರ್ ನಲ್ಲಿದ್ದ 500 ರೂ. ಯ 2 ಬಂಡನ್ ಹಣವನ್ನು ಎಗರಿಸಿ ಎಸ್ಕೇ ಪ್ ಆಗಿದ್ದಾನೆ. ಈ ವೇಳೆ ಅಲ್ಲಿದ್ದ ಗ್ರಾಹಕರು ಬೊಬ್ಬೆ ಹಾಕಿದಾಗ ಬಾಲಕ ಪರಾರಿಯಾಗಿದ್ದಾನೆ.
ಕೂಡಲೇ ಬ್ಯಾಂಕ್ ಮ್ಯಾನೇಜರ್ ಲಕ್ಷ್ಮೀ ನಾರಾಯಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಣ ಎಗರಿಸಿದ ಬಾಲಕ ಬೇರೆ ಜಿಲ್ಲೆಗೆ ಪರಾರಿಯಾಗದಂತೆ ಇಡೀ ಜಿಲ್ಲೆಯನ್ನು ಬ್ಲಾಕ್ ಮಾಡಿ ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಚೋರನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
- Advertisement -