Friday, April 19, 2024
spot_imgspot_img
spot_imgspot_img

ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್‌ಚಂದ್ ಗೆಹ್ಲೋಟ್ ನೇಮಕ

- Advertisement -G L Acharya panikkar
- Advertisement -

ನವದೆಹಲಿ: ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ತಾವರ್‌ಚಂದ್ ಗೆಹ್ಲೋಟ್ ಅವರು ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ನೇಮಕಾತಿ ಆದೇಶ ಮಾಡಿದ್ದಾರೆ.

ಹಾಲಿ ರಾಜ್ಯಪಾಲ ವಜುಭಾಯಿವಾಲಾ ಅವರ ಅವಧಿ ಪೂರ್ಣಗೊಂಡಿದೆ. ಅವರ ಸ್ಥಾನಕ್ಕೆ ತಾವರ್‌ಚಂದ್ ಗೆಹ್ಲೋಟ್ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಸಚಿವ ಸಂಪುಟದ ಪುನರ್‌ರಚನೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಈ ನೇಮಕಾತಿ ಆದೇಶ ಹೊರಬಂದಿದೆ.

ಮೂರು ಬಾರಿ ಮಧ್ಯಪ್ರದೇಶ ಶಾಸಕರಾಗಿ, ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಗೆಹ್ಲೋಟ್, ಈಗ ರಾಜ್ಯಸಭೆಯ ಸದಸ್ಯರು ಆಗಿದ್ದಾರೆ.

- Advertisement -

Related news

error: Content is protected !!