Tuesday, July 28, 2026
spot_imgspot_img
spot_imgspot_img

ದ. ಕ ಜಿಲ್ಲೆಯ ಅಡಿಕೆ ವ್ಯಾಪಾರಿಗಳಿಗೆ ಗುಜರಾತ್ ಮೂಲದ ವ್ಯಾಪಾರಿಯಿಂದ ಭಾರೀ ವಂಚನೆ ಆರೋಪ

- Advertisement -
- Advertisement -

ಮಂಗಳೂರು: ಮಂಗಳೂರಿನಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದ ಗುಜರಾತ್ ಮೂಲದ ವ್ಯಾಪಾರಿಯೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಅಡಿಕೆ ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಈತ ಮಂಗಳೂರಿನ ಬೈಕಂಪಾಡಿಯಲ್ಲಿ 30 ವರ್ಷಗಳಿಂದ ಅಡಿಕೆ ವ್ಯಾಪಾರ ನಡೆಸುತ್ತಿದ್ದ. ಅಡಿಕೆ ವ್ಯಾಪಾರಿಗಳ ವಿಶ್ವಾಸ ಪಡೆದುಕೊಂಡ ಬಳಿಕ ಸುಳ್ಯ, ಬೆಳ್ಳಾರೆ, ಪುತ್ತೂರು, ಮಂಗಳೂರು ಸಹಿತ ವಿವಿಧ ಭಾಗಗಳ ವ್ಯಾಪಾರಿಗಳಿಂದ ಅಡಿಕೆ ಖರೀದಿಸಿ ಹಣ ನೀಡದೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಸುಳ್ಯದ 5-6 ಮಂದಿ ವ್ಯಾಪಾರಿಗಳಿಗೆ ತಲಾ 5ರಿಂದ 20 ಲಕ್ಷ ರೂ.ಗೂ ಅಧಿಕ ವಂಚಿಸಿರುವ ಆರೋಪ ಕೇಳಿಬಂದಿದೆ. ಆತನ ಫೋನ್ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ ಮಂಗಳೂರಿನ ವ್ಯಾಪಾರಿಯೊಬ್ಬರು ಠಾಣೆಗೆ ದೂರು ನೀಡಿದ್ದು, ತನಗೆ 8.9 ಲಕ್ಷ ರೂ. ವಂಚನೆಯಾಗಿದೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!