Friday, May 3, 2024
spot_imgspot_img
spot_imgspot_img

ದಾಸವಾಳದಿಂದ ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು

- Advertisement -G L Acharya panikkar
- Advertisement -

ಯಾವುದೇ ರೀತಿಯ ತ್ವಚೆಗೂ ಫೇಸ್ ಮಾಸ್ಕ್ ಅತ್ಯಗತ್ಯ ಫೇಸ್ ಮಾಸ್ಕ್ ತ್ವಚೆಯ ರಂಧ್ರಗಳನ್ನು ಶುಚಿಗೊಳಿಸುವುದಲ್ಲದೆ, ತ್ವಚೆಯನ್ನು ಕೋಮಲವಾಗಿರಿಸುತ್ತದೆ. ಅಂತಹದ್ದೇ ಫೇಸ್‌ಪ್ಯಾಕ್‌ಗಳಲ್ಲಿ ದಾಸವಾಳ ಕೂಡಾ ಒಂದು. ದಾಸವಾಳ ಹೂವಿನಲ್ಲಿರುವ ವಿಟಮಿನ್ ಸಿ, ಬೀಟಾ-ಕ್ಯಾರೋಟಿನ್ ಮತ್ತು ಉತ್ಕರ್ಷಣ ನಿರೋಧಕಗಳು ನಮ್ಮ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ದಾಸವಾಳವು ನೈಸರ್ಗಿಕ ಬೊಟೊಕ್ಸ್ ಗುಣಲಕ್ಷಣಗಳನ್ನು ಹೊಂದಿರುವ ಏಕೈಕ ಹೂವಾಗಿದೆ. ವಿಟಮಿನ್ ಸಿ ಯ ಸಮೃದ್ಧತೆಯು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಮುಖವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ದಾಸವಾಳದ ಹೂವಿನ ಪೇಸ್ಟ್ ಮಾಡಿ ಮತ್ತು ನಿಮ್ಮ ಮುಖದ ಮೇಲೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ ನಂತರ ಚೆನ್ನಾಗಿ ತೊಳೆಯಿರಿ.

ತ್ವಚೆಯ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ. ದಾಸವಾಳದ ನೈಸರ್ಗಿಕ ಸರ್ಫ್ಯಾಕ್ಟಂಟ್‌ಗಳ ಗುಣವು ಚರ್ಮವನ್ನು ಅದರ ನೈಸರ್ಗಿಕ ತೈಲಗಳನ್ನು ಕಳೆದುಕೊಳ್ಳದೆ
ಆಳವಾದ ಶುದ್ದೀಕರಣಕ್ಕೆ ಸಹಾಯ ಮಾಡುತ್ತದೆ. ದಾಸವಾಳದಲ್ಲಿರುವ AHA ಗಳು ಸತ್ತ ಜೀವಕೋಶಗಳನ್ನುತೆಗೆದುಹಾಕುತ್ತದೆ. ಚರ್ಮವನ್ನು ತಾಜಾವಾಗಿ ಕಾಣುವಂತೆ ಮಾಡುವ ಮೂಲಕ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ.

ದಾಸವಾಳದ ದಳಗಳು ಹೆಚ್ಚಿನ ಲೋಳೆಯ ಅಂಶವನ್ನು ಹೊಂದಿದೆ ಮತ್ತು ಈ ಗುಣವು ದಾಸವಾಳವನ್ನು ಚರ್ಮಕ್ಕೆ ಮಾಯಿಶ್ಚರೈಸ್ ಮಾಡುತ್ತದೆ. ದಾಸವಾಳ ಹೂವಿನ ಪೇಸ್ಟ್ ಅನ್ನು ಹಚ್ಚುವುದರಿಂದ ನೈಸರ್ಗಿಕವಾಗಿ ಒಣ ಚರ್ಮವನ್ನು ಹೈಟ್ರೇಟ್ ಮಾಡುವುದರ ಜೊತೆಗೆ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ.

ಯಾವುದೇ ಚರ್ಮದ ಟೋನ್, ಹೈಪರ್ಪಿಗೊಂಟೇಶನ್, ಕಪ್ಪು ಕಲೆಗಳಿಗೆ ದಾಸವಾಳವು ತ್ವರಿತ ಪರಿಹಾರವನ್ನು ನೀಡುತ್ತದೆ. ಸಿಟ್ರಿಕ್ ಮತ್ತು ಮಾಲಿಕ್ ಆಮ್ಲಗಳನ್ನು ಒಳಗೊಂಡಿದೆ. ಇದು ಚರ್ಮದ ಬಣ್ಣವನ್ನು ನವೀಕರಿಸುವ ಮೂಲಕ ಜೀವಕೋಶಗಳನ್ನು ಪೋಷಿಸುವ ಬಲವಾದ ಎಫೋಲಿಯೇಟಿಂಗ್ ಗುಣಲಕ್ಷಣಗಳನ್ನು ಹೊಂದಿದೆ.

- Advertisement -

Related news

error: Content is protected !!