- Advertisement -
- Advertisement -
ಮಂಗಳೂರು: ಮೀನುಗಾರಿಕೆ ವೇಳೆ ಆಯತಪ್ಪಿ ಸಮುದ್ರಕ್ಕೆ ಬಿದ್ದ ಬೋಟ್ ಚಾಲಕರೋರ್ವರು ನಾಪತ್ತೆಯಾದ ಘಟನೆ ವರದಿಯಾಗಿದೆ.
ಮುನೀಶ್ ಕುಮಾರ್ (32) ನಾಪತ್ತೆಯಾದ ಬೋಟ್ ಚಾಲಕ.
ಮುನೀಶ್ ಅವರು ದಕ್ಷಿಣ ದಕ್ಕೆಯಲ್ಲಿ ಇರ್ಫಾನ್ ಅವರ ಮಾಲಕತ್ವದ ಕುವತ್ ಹೆಸರಿನ ಬೋಟ್‌ನ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಮುನೀಶ್ ಅವರು ಇತರ 10 ಮಂದಿ ಮೀನುಗಾರರೊಂದಿಗೆ ಮೀನುಗಾರಿಕೆಗೆಂದು ಏ. 15ರಂದು ರಾತ್ರಿ ತೆರಳಿದ್ದರು.
ನಂತರ ಏ. 17ರಂದು ಮೀನು ಹಿಡಿಯುವ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಸಮುದ್ರಕ್ಕೆ ಮುನೀಶ್ ಬಿದ್ದಿದ್ದಾರೆ. ಬಳಿಕ ಬೋಟ್ ನಲ್ಲಿದ್ದ ಇತರೆ ಮೀನುಗಾರರು ಹುಡುಕಾಟ ನಡೆಸಿದರೂ ಮುನೀಶ್ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.
- Advertisement -