Sunday, May 5, 2024
spot_imgspot_img
spot_imgspot_img

ಖ್ಯಾತ ಮಾಡೆಲ್​ ಮೃತದೇಹ ಫ್ರಿಡ್ಜ್​ನಲ್ಲಿ ಪತ್ತೆ!

- Advertisement -G L Acharya panikkar
- Advertisement -

ಖ್ಯಾತ ಮಾಡೆಲ್​ ಮಲೀಸಾ ಮೂನಿಯ ಭೀಕರ ಹತ್ಯೆಯಾಗಿದ್ದು, ಈಕೆಯ ಮೃತದೇಹ ಫ್ರಿಡ್ಜ್​ನಲ್ಲಿ ಪತ್ತೆಯಾಗಿದೆ/ ಮತ್ತೊಮ್ಮೆ ಫ್ರಿಡ್ಜ್​ ಸದ್ದು ಮಾಡುತ್ತಿದೆ. ಇದಾಗಲೇ ಹೆಣ್ಣುಮಕ್ಕಳ ತುಂಡು ತುಂಡಾದ ಮೃತದೇಹಗಳು ಫ್ರಿಡ್ಜ್​ನಲ್ಲಿ ಪತ್ತೆಯಾಗಿರುವ ವರದಿಯಾಗಿದೆ. ದೆಹಲಿಯ ಶ್ರದ್ಧಾ ಪ್ರಕರಣ ಮಾತ್ರ ಭಾರಿ ಸುದ್ದಿಯಾಗಿತ್ತು. ಆದರೆ ಈ ರೀತಿ ಪ್ರೀತಿಯಲ್ಲಿ ಸಿಲುಕಿ ತಮ್ಮ ಜೀವವನ್ನು ಕಳೆದುಕೊಂಡವರು ಅದೆಷ್ಟೋ ಮಂದಿ. ಆದರೆ ಇಂಥ ನೀಚ ಕೃತ್ಯ ಭಾರತದಲ್ಲಿ ಮಾತ್ರವಲ್ಲದೇ, ವಿದೇಶಗಳಲ್ಲಿಯೂ ನಡೆಯುತ್ತಿದೆ. ತಮ್ಮ ಅಗತ್ಯ ಪೂರೈಸಿದ ಬಳಿಕವೋ ಇಲ್ಲವೇ ಪ್ರೇಯಸಿ ಗರ್ಭಿಣಿ ಎಂದು ತಿಳಿದ ಕೂಡಲೆ ಅವರನ್ನು ಕೊಲೆ ಮಾಡುವುದು ಮಾತ್ರವಲ್ಲದೇ, ನಿರ್ದಾಕ್ಷಿಣ್ಯವಾಗಿ ದೇಹವನ್ನು ತುಂಡು ತುಂಡು ಮಾಡಿ ಒಂದೊಂದು ಭಾಗವನ್ನು ಒಂದೊಂದು ಕಡೆ ಬೀಸಾಕುವುದು ಇಲ್ಲವೇ ಸ್ವಲ್ಪ ದಿನ ವಾಸನೆ ಬರದಂತೆ ದೇಹದ ಭಾಗಗಳನ್ನು ಫ್ರಿಡ್ಜ್​ನಲ್ಲಿ ಇಡುವುದು ಸರ್ವೇ ಸಾಮಾನ್ಯ ಎನ್ನಿಸುವ ಮಟ್ಟಿಗೆ ವಿದೇಶಗಳಲ್ಲಿಯೂ ಕೃತ್ಯ ನಡೆಯುತ್ತಿದೆ.

ಇದೀಗ ಇಂಥ ಭಯಾನಕ ಸಾವಿಗೆ ಸಾಕ್ಷಿಯಾಗಿದ್ದಾರೆ ಲಾಸ್ ಏಂಜಲೀಸ್​ನ ಪ್ರಸಿದ್ಧ ಮಾಡೆಲ್​. 31 ವರ್ಷದ ಖ್ಯಾತ ರೂಪದರ್ಶಿ ಮಲೀಸಾ ಮೂನಿ ತುಂಡು ತುಂಡಾದ ಮೃತದೇಹವು ಫ್ರಿಡ್ಜ್​ನಲ್ಲಿ ಸಿಕ್ಕಿದೆ. ಮಲೀಸಾ ಅವರ ಕೈ ಕಾಲುಗಳನ್ನು ಬಿಗಿಯಾಗಿ ಕಟ್ಟಿ ದೇಹವನ್ನು ತುಂಡು ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಮಯದಲ್ಲಿ ಮಲೀಸಾ ಎರಡು ತಿಂಗಳ ಗರ್ಭಿಣಿ ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆಯಲ್ಲಿ ಈಕೆ ಎರಡು ತಿಂಗಳ ಗರ್ಭಿಣಿ ಎನ್ನುವುದು ತಿಳಿದುಬಂದಿದೆ. ಮಲೀಸಾ ದೇಹದ ಮೇಲೆ ಗಾಯದ ಗುರುತುಗಳು ಕಾಣಿಸಿವೆ. ಭೀಕರವಾಗಿಯೇ ಮಲೀಸಾ ಸಾವನ್ನಪ್ಪಿದ್ದಾರೆ.

ಈ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಇನ್ನಷ್ಟು ಆತಂಕಕಾರಿ ಸಂಗತಿಗಳು ತಿಳಿದಿವೆ. ಅದೇನೆಂದರೆ, ಈಕೆಯನ್ನು ಸೆಪ್ಟೆಂಬರ್ 12 ರಂದು ತನ್ನ ಮನೆಯ ಸಮೀಪ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈಕೆ ಗರ್ಭಿಣಿಯಾಗಿದ್ದೇ ಕೊಲೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೇ, ಈಕೆಯನ್ನು ಸಾಯಿಸುವುದಕ್ಕೂ ಮುನ್ನ ಆರೋಪಿ ದೈಹಿಕ ಹಲ್ಲೆ ನಡೆಸಿದ್ದರು ಎಂದು ಶವಪರೀಕ್ಷೆ ವರದಿ ಹೊರಬಿದ್ದಿದೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಈಕೆಯ ಮುಖ, ಕುತ್ತಿಗೆ, ಬೆನ್ನು ಮತ್ತು ಎಡಗೈಯ ಮೇಲ್ಭಾಗದಲ್ಲಿ ಗಂಭೀರವಾದ ಗಾಯಗಳು ಕಂಡುಬಂದಿವೆ. ಇದಲ್ಲದೆ, ಬೆಂಝಾಯ್ಲೆಕ್ಗೋನಿನ್, ಕೋಕೆಥಿಲೀನ್ ಮತ್ತು ಎಥೆನಾಲ್ ಮಿಶ್ರಣದಂತಹ ಔಷಧಗಳು ಅವರ ದೇಹದಲ್ಲಿ ಕಂಡುಬಂದಿವೆ.

ಮದ್ಯಪಾನ ಮತ್ತು ಡ್ರಗ್ಸ್‌ನ ಅಮಲಿನಲ್ಲಿದ್ದ ಮಾಡೆಲಾ ಅವರನ್ನು ಹೊಡೆದು ಸಾಯಿಸಿರುವುದು ಸಾವಿನ ಪ್ರಾಥಮಿಕ ಶೈಲಿಯಾಗಿದೆ. ಅಂದರೆ ಸಾಯಿಸುವುದಕ್ಕೂ ಮುನ್ನ ಈಕೆಗೆ ಮದ್ಯಪಾನ ಮತ್ತು ಡ್ರಗ್ಸ್​ ನೀಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರೀತಿಗೆ ಬೀಳುವ ಮುನ್ನ ಇಲ್ಲವೇ ಯುವಕರು ತೋರುವ ಆಮಿಷಗಳಿಗೆ ಬಲಿಯಾಗುವ ಮುನ್ನ ಭವಿಷ್ಯದ ಬಗ್ಗೆ ಕಾಳಜಿ ತೋರಿ ಎಂದು ಯುವತಿಯರಿಗೆ ಪೊಲೀಸರು ಕಿವಿ ಮಾತು ಹೇಳಿದ್ದಾರೆ.

- Advertisement -

Related news

error: Content is protected !!