Wednesday, June 17, 2026
spot_imgspot_img
spot_imgspot_img

ಕಾಣೆಯಾಗಿದ್ದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಶವ ಪತ್ತೆ..!; ಕೊಲೆ ಆರೋಪಿ ಬಂಧನ

- Advertisement -
- Advertisement -

ನಾಪತ್ತೆಯಾಗಿದ್ದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತಾಲೂಕಿನ ಆಗುಂಬೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆಗುಂಬೆಯ ಕುಶಾಲ್ ಎಂಬುವರ ಪುತ್ರಿ ಪೂಜಾ (24) ಮೃತದೇಹ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.ಕೊಲೆ ಆರೋಪಿ ಮಣಿಯನ್ನು ಬಂಧಿಸಲಾಗಿದೆ.

ಪೂಜಾ ಜೂ.30 ರಂದು ನಾಪತ್ತೆಯಾಗಿದ್ದು, ಈ ಪ್ರಕರಣದ ತನಿಖೆ ಆಗುಂಬೆ ಪೊಲೀಸ್ ಠಾಣೆ ಪಿ ಎಸ್ ಐ ರಂಗನಾಥ್ ಅಂತರಗಟ್ಟಿ ನೇತೃತ್ವದಲ್ಲಿ ನಡೆದಿದ್ದು, ಬಳಿಕ ಆಕೆಯ ಫೋನ್‌ ಕಾಲ್‌ ಲಿಸ್ಟ್‌ ತೆಗೆದು ಮಿಸ್ಸಿಂಗ್‌ ಆದ ಕೊನೆ ದಿನ ಯಾರೆಲ್ಲ ಕರೆ ಮಾಡಿದ್ದರು ಅವರನ್ನೆಲ್ಲ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಹಲವು ವರ್ಷಗಳಿಂದ ಸ್ನೇಹಿತನಾಗಿದ್ದ ಮಣಿಕಂಠ ಎನ್ನುವಾತ ಪೂಜಾಳನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಹಣಕಾಸಿ‌ ವಿಚಾರಕ್ಕೆ ಜಗಳ ನಡೆದು ಕೊಲೆ ಮಾಡಿ ಬಳಿಕ ಆಗುಂಬೆ ಅರಣ್ಯ ಪ್ರದೇಶದಲ್ಲಿ ಬಿಸಾಡಿ ಹೋಗಿದ್ದಾನೆ ಎಂದು ತಿಳಿದುಬಂದಿದೆ. ಶನಿವಾರ ರಾತ್ರಿ 11 ರ ವೇಳೆ ಆರೋಪಿ ಮಣಿಯನ್ನು ಘಟನೆ ನಡೆದ ಸ್ಥಳಕ್ಕೆ ಕರೆದು ಸ್ಥಳ ಮಹಜರು ಮಾಡಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತದೆ.

- Advertisement -

Related news

error: Content is protected !!