

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ಧೂರಿ ಸಮಾರಂಭ ನಡೆಯಲಿದ್ದು, ಅಂತಿಮ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಪದಗ್ರಹಣ ಮಾಡಲಿದ್ದಾರೆ. ಇಂದು ಸಂಜೆ 7ಗಂಟೆ 15 ನಿಮಿಷಕ್ಕೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೇರೆ ದೇಶದ ಗಣ್ಯರು ಆಗಮಿಸಿದ್ದಾರೆ. ಘಟಾನುಘಟಿ ನಾಯಕರುಗಳ ಆಗಮನವಾಗುತ್ತಿದೆ.
ಇನ್ನು ಮೋದಿ ಜೊತೆಗೆ ಕೇಂದ್ರ ಸಚಿವರಾಗಿ ಕರ್ನಾಟಕದಿಂದ ಐವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅದರಲ್ಲಿ ಈ ಹಿಂದಿನ ಸರ್ಕಾರದಲ್ಲಿ ಕರ್ನಾಟಕದಿಂದ ಮಂತ್ರಿಗಳಾಗಿ ನಿರ್ಮಲಾ ಸೀತಾರಾಮನ್, ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ ಮತ್ತೊಂದು ಬಾರಿ ಅವಕಾಶ ಪಡೆದುಕೊಂಡಿದ್ಧಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಿತ್ರ ಪಕ್ಷ ಜೆಡಿಎಸ್ ಕೋಟಾದಲ್ಲಿ ಸಚಿವರಾದರೆ, ಮಾಜಿ ಸಚಿವ ಹಾಗೂ ತುಮಕೂರು ಕ್ಷೇತ್ರದಿಂದ ಸಂಸದರಾಗಿರುವ ವಿ.ಸೋಮಣ್ಣ ಅವರು ಕೇಂದ್ರದಲ್ಲಿ ಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.. ಈಗಾಗಲೇ ಎಲ್ಲಾ ಐದು ಮಂದಿಗೆ ಸಿದ್ದರಿರುವಂತೆ ಸೂಚನೆ ನೀಡಲಾಗಿದೆ. ಶೋಭಾ ಕರಂದ್ಲಾಜೆ ಹಾಗೂ ಸೋಮಣ್ಣ ಅವರು ರಾಜ್ಯ ಸಚಿವರಾದರೆ ಇನ್ನು ಮೂವರು ಸಂಪುಟ ದರ್ಜೆ ಸಚಿವರು. ಇನ್ನು ಶೋಭಾ, ಸೋಮಣ್ಣ ಅವರಿಗೆ ಮಣೆ ಹಾಕಿರುವುದು ರಾಜ್ಯ ಬಿಜೆಪಿ ನಾಯಕರ ಅಚ್ಚರಿಗೆ ಕಾರಣವಾಗಿದೆ.








