Friday, June 28, 2024
spot_imgspot_img
spot_imgspot_img

ಗಂಡ ಬೇರೆ ಮನೆ ಮಾಡಲಿಲ್ಲ ಅಂತ ಅತ್ತೆಯನ್ನು ಹೊಡೆದು ಕೊಂದ ಸೊಸೆ..!!

- Advertisement -G L Acharya panikkar
- Advertisement -

ಗಂಡ ಬೇರೆ‌ ಮನೆ ಮಾಡಲಿಲ್ಲವೆಂದು ಸಹೋದರರನ್ನು ಕರೆಸಿ ಗಂಡ ಮತ್ತು ಅತ್ತೆ ಮೇಲೆ ಹಲ್ಲೆ ಮಾಡಿದ್ದು, ತೀವ್ರವಾಗಿ ಹಲ್ಲೆಗೊಳಗಾಗಿದ್ದ ಅತ್ತೆ ಮಹಾಬೂಬಿ ಯಾಕೂಶಿ(53) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.

ಸೊಸೆ ಮೇಹರೂಣಿ ಯಾಕೂಶಿ ಮತ್ತು ಇಬ್ಬರು ಸಹೋದರರ ಜತೆ ಸೇರಿ ಹಲ್ಲೆ ಮಾಡಲಾಗಿತ್ತು. ಈ ವೇಳೆ ರಾಡ್‌ನಿಂದ ಗಂಡ ಸುಬಾನ್ ಮತ್ತು ಅತ್ತೆ ಮಹಾಬೂಬಿ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಹಾಬೂಬಿ ಸಾವನ್ನಪ್ಪಿದ್ದರೆ.

ಇವರಿಬ್ಬರು ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ ಒಂದು ವರ್ಷ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಬಿರುಗಾಳಿ ಬೀಸಲಾರಂಭಿಸಿತ್ತು. ಒಂದು ವರ್ಷದ ಬಳಿಕ ಪತ್ನಿ ಮೇಹರೂಣಿ ಬೇರೆ ಮನೆ ಮಾಡುವಂತೆ ಗಂಡನಿಗೆ ಕಿರುಕುಳ ನೀಡಲು ಆರಂಭಿಸಿದ್ದಳು. ಇದನ್ನ ಒಪ್ಪದ ಸುಬಾನ್ ಹಾಗೂ ಅತ್ತೆ ಜೊತೆ ನಿರಂತರ ಜಗಳವಾಡುತ್ತಿದ್ದಳು.

ಇದೇ ಜಗಳ ತಾರಕಕ್ಕೇರಿ ಮೇಹರೂಣಿ ಮತ್ತು ಅವಳ ಸಹೋದರರಾದ ಶೋಯೆಬ್‌, ಸಮನ್ ತಿಗಡಿಯನ್ನ ಕರೆಯಿಸಿ ಇಬ್ಬರ ಮೇಲು ಹಲ್ಲೆ ಮಾಡಿಸಿದ್ದಳು. ಇದರಿಂದ ತೀವ್ರ ಗಾಯಗೊಂಡ ಅತ್ತೆ ಸಾವನ್ನಪ್ಪಿದ್ದರೆ. ಇದೀಗ ಮೂರು ಜನರ ವಿರುದ್ಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೊಸೆ ಮತ್ತು ಸಹೋದರರನ್ನ ಬಂಧಿಸುವಂತೆ ಪತಿ ಮತ್ತು ಕುಟುಂಬಸ್ಥರ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!