Wednesday, June 17, 2026
spot_imgspot_img
spot_imgspot_img

ಹೆರಿಗೆ ಅರ್ಧಕ್ಕೆ ಬಿಟ್ಟ ವೈದ್ಯ – ಗರ್ಭಿಣಿ ಮಹಿಳೆ ಸಾವು..!!

- Advertisement -
- Advertisement -

ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿಯೊಬ್ಬಳು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ನಡೆದಿದೆ.

ಶೇಜಲ್‌ ಅನಿಕೇತ್‌ ಮಾಳಿ (22) ಮೃತ ಗರ್ಭಿಣಿ. ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ್‌ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಆರ್‌ಎಂಪಿ ವೈದ್ಯ ಮಹಾವೀರ್‌ ಬಂಕಾಪುರೆ ಎಂಬಾತನ ವಿರುದ್ಧ ಆರೋಪ ಕೇಳಿಬಂದಿದೆ. ಗರ್ಭಿಣಿ ಶೇಜಲ್‌ ಹೆರಿಗೆಗೆಂದು ಬಂಕಾಪುರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ವೇಳೆ ಶೇಜಲ್‌ ಸ್ಥಿತಿ ಚಿಂತಾಜನಕವಾಗಿದೆ. ಇದರಿಂದಾಗಿ ಹೆರಿಗೆಯನ್ನು ಅರ್ಧಕ್ಕೆ ಬಿಟ್ಟ ವೈದ್ಯ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ಶಿಫ್ಟ್‌ ಮಾಡಿದ್ದಾರೆ. ಇದರಿಂದಾಗಿ ಶೇಜಲ್‌ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಘಟನೆಗೆ ಸಂಬಂಧಿಸಿ ವೈದ್ಯನ ಮನೆ ಎದುರು ಮೃತ ಗರ್ಭಿಣಿಯ ಕುಟುಂಬಸ್ಥರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು. ಘಟನೆ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!