Sunday, June 29, 2025
spot_imgspot_img
spot_imgspot_img

ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿ : ಚಾಲಕ ಮೃತ್ಯು

- Advertisement -
- Advertisement -

ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಮಾ.29 ರಂದು ಗುರುವಾಯನಕರೆಯ ಶಕ್ತಿನಗರದ ಬಳಿ ಸಂಭವಿಸಿದೆ.

ಬೆಳ್ತಂಗಡಿಯಿಂದ ಮೂಡಬಿದಿರೆಗೆ ಹೋಗುತ್ತಿದ್ದ ಕಾರು ಶಕ್ತಿನಗರದ ಬಳಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿಯಾಗಿದೆ. ಪರಿಣಾಮ ಚಾಲಕ ಲಾಯಿಲ ಮೋರ್ನಿಂಗ್‌ ಸ್ಟಾರ್‌ ನಿವಾಸಿ ವಿವಿ ಮ್ಯಾಥ್ಯೂ ಅವರ ಮಗ ಪ್ರೈಸ್‌ ಮ್ಯಾಥ್ಯು(32) ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.

ಬೆಳ್ತಂಗಡಿ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -

Related news

error: Content is protected !!