Friday, May 3, 2024
spot_imgspot_img
spot_imgspot_img

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ..!

- Advertisement -G L Acharya panikkar
- Advertisement -

ರಾಜ್ಯದಲ್ಲಿ ಭೀಕರ ಬರ ಹಿನ್ನೆಲೆಯಲ್ಲಿ ರೈತನೊಬ್ಬ ಸಾಲಬಾಧೆ ತಾಳಲಾರದೆ ಹೊಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ರೈತ ಹಿರೇಸಿಂದೋಗಿ ಗ್ರಾಮದ ದ್ಯಾಮ ನಾಯಕ (28) ಎಂದು ಗುರುತಿಸಲಾಗಿದೆ.

ಇವರು ಜೀವನಕ್ಕಾಗಿ ವ್ಯವಸಾಯ ಮಾಡುತ್ತಿದ್ದರು. ಹೀಗಾಗಿಯೇ ಈ ಬಾರಿ ಬೆಳೆ ಬರುತ್ತದೆ ಎಂದು ಹೊಲಕ್ಕಾಗಿ ಬ್ಯಾಂಕ್ ಮತ್ತು ಸ್ವಸಹಾಯ ಗುಂಪಿನಿಂದ 40 ಸಾವಿರ ರೂಪಾಯಿಗಳ ಸಾಲ ಪಡೆದುಕೊಂಡಿದ್ದರು.

ಆದರೆ ಈ ಬಾರಿ ಮಳೆ ಸರಿಯಾದ ಸಮಯಕ್ಕೆ ಸುರಿಯದಿದ್ದ ಕಾರಣ ಇವರ ಹೊಲದಲ್ಲಿ ಬೆಳೆ ನಾಶವಾಗಿತ್ತು. ಇದರಿಂದ ಆರ್ಥಿಕವಾಗಿ ಸಮಸ್ಯೆ ಅನುಭವಿಸುತ್ತಿದ್ದ ರೈತ ಸಾಲ ಕೂಡ ವಾಪಸ್ ಮಾಡಿರಲಿಲ್ಲ. ಇದರಿಂದ ಬೇಸತ್ತು ಹೊಲದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

- Advertisement -

Related news

error: Content is protected !!