Saturday, June 28, 2025
spot_imgspot_img
spot_imgspot_img

ಕಡಬ: ಮನೆಯೊಳಗಿದ್ದ ಫ್ರಿಡ್ಜ್‌ ಸ್ಪೋಟ : ಮನೆಮಂದಿ ಅಪಾಯದಿಂದ ಪಾರು

- Advertisement -
- Advertisement -

ಕಡಬ: ಮನೆಯೊಳಗಿದ್ದ ಫ್ರಿಡ್ಜ್‌ ಸ್ಪೋಟಗೊಂಡು ವಿದ್ಯುತ್ ಉಪಕರಣ ಸೇರಿದಂತೆ ಮನೆಯ ದಾಖಲೆ ಪತ್ರಗಳು ಸುಟ್ಟುಹೋದ ಘಟನೆ ಕಡಬದಲ್ಲಿ ನಡೆದಿದೆ.


ಕಡಬದ ಅಡ್ಡಗದ್ದೆ ಅಂಗನವಾಡಿ ಬಳಿ ಇರುವ ಫಾರುಕ್ ಎಂಬವರ ಮನೆಯಲ್ಲಿ ಈ ಅವಘಡ ನಡೆದಿದೆ. ಮಧ್ಯಾಹ್ನದ ವೇಳೆ ಫಾರುಕ್ ಮತ್ತು ಅವರ ಪತ್ನಿ ಸಹಿತ ಮಕ್ಕಳು ಮನೆಯಲ್ಲಿದ್ದರು. ಬಳಿಕ ಪತ್ನಿ ಮಕ್ಕಳು ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದು ಫಾರುಕ್ ಅವರು ತಹಶಿಲ್ದಾರ್ ಕಚೇರಿ ಬಳಿ ಇರುವ ತನ್ನ ಅಂಗಡಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಅವಘಡ ಸಂಭವಿಸಿದ್ದು ದೊಡ್ಡ ದುರಂತವೊಂದು ತಪ್ಪಿದೆ.

ಸುಮಾರು ಐದು ವರ್ಷಗಳ ಹಿಂದೆ ಅವರು ಫ್ರಿಡ್ಜ್‌ ಖರೀದಿಸಿದ್ದರು. ಎಂದಿನಂತೆ ರೆಫ್ರಿಜರೇಟರ್ ಚಾಲು ಮಾಡಿದ್ದರು.ಮನೆಯ ಸುತ್ತ ಹೊಗೆ ಕಾಣಿಸಿಕೊಂಡ ಹಿನ್ನಲೆ‌ ಸ್ಥಳೀಯರು ಸಂಶಯಗೊಂಡು ನೋಡಿದಾಗ ಬೆಂಕಿ ಉರಿಯುತ್ತಿರುವುದು ಕಂಡು ಬಂದಿದೆ. ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸಲು ಸಹರಿಸಿದ್ದಾರೆ.

- Advertisement -

Related news

error: Content is protected !!