Sunday, May 5, 2024
spot_imgspot_img
spot_imgspot_img

ರೀಲ್ಸ್‌ನಲ್ಲಿ ಜೈ ಶ್ರೀರಾಮ್‌ ಎಂದ ಮುಸ್ಲಿಂ ಯುವಕ-ಯುವತಿಗೆ ಬೆದರಿಕೆ; ಆರೋಪಿ ಅರೆಸ್ಟ್‌

- Advertisement -G L Acharya panikkar
- Advertisement -

ಬುರ್ಖಾ ಹಾಕಿದ ಯುವತಿ ಮತ್ತು ಟೋಪಿ ಧರಿಸಿದ ಯುವಕ ರೀಲ್ಸ್‌ನಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕೆ ಸಿಟ್ಟಾಗಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದ ಆರೋಪಿಯನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ನಯಾಜ್ ಖಾನ್ ಬಂಧಿತ ಆರೋಪಿ. ಈತ ಕೋಣನಕುಂಟೆಯವನಾಗಿದ್ದು, ವೃತ್ತಿಯಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದಾನೆ. ಮುಸ್ಲಿಂ ಯುವಕ, ಯುವತಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ರೀಲ್ಸ್ ಮಾಡಿದ್ದರು.ಈ ರೀಲ್ಸ್‌ ವೈರಲ್‌ ಆದ ಬೆನ್ನಲ್ಲೇ ಕೋಪಗೊಂಡ ಆರೋಪಿ ನಯಾಜ್ ಹಾಕಿಕೊಂಡಿರೋ ಬುರ್ಕಾ ತೆಗೆದು ಜೈ ಶ್ರೀರಾಮ್ ಎಂದು ರೀಲ್ಸ್ ಮಾಡುವಂತೆ ತಾಕೀತು ಮಾಡಿದ್ದಲ್ಲದೇ, ಯುವಕ ಯುವತಿಗೆ ಬೆದರಿಕೆ ಹಾಕಿ ವಿಡಿಯೋ ಮಾಡಿದ್ದ. ಆರೋಪಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ತಲಘಟ್ಟಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಜೈಶ್ರೀರಾಮ್‌ ಎಂದು ಘೋಷಣೆ ಮಾಡುವ ಮುಸ್ಲಿಂ ದಿರಸು ಧರಿಸಿದವರು ನಿಜಕ್ಕೂ ಮುಸ್ಲಿಮರೇನಾ ಎನ್ನುವುದು ಸ್ಪಷ್ಟವಿಲ್ಲ. ಯಾಕೆಂದರೆ, ಇದರಲ್ಲಿ ಹುಡುಗನ ಕೊರಳಲ್ಲಿ ಶಿಲುಬೆಯೂ ಇದೆ. ಆದರೆ, ಬೆಂಗಳೂರು ಪೊಲೀಸರಿಗೆ ಮುಖ್ಯವಾಗಿದ್ದು ಬೆದರಿಕೆ ಹಾಕಿದ ಯುವಕ ಬೆಂಗಳೂರಿನವನೇ ಎನ್ನುವುದು. Right wing guy ಎಂಬವರು ಮಾಡಿದ ಟ್ವೀಟ್‌ ಆಧಾರಿಸಿ ಅವರು ಬಲೆ ಬೀಸಿದಾಗ ನಯಾಜ್‌ ಖಾನ್‌ ಸಿಕ್ಕಿಬಿದ್ದಿದ್ದಾನೆ.

- Advertisement -

Related news

error: Content is protected !!