Thursday, May 16, 2024
spot_imgspot_img
spot_imgspot_img

ಕರಸೇವಕರ ಬಂಧನ ಮಾಡಿದ್ದ ಇನ್ಸ್‌ಪೆಕ್ಟರ್‌ಗೆ ಕಡ್ಡಾಯ ರಜೆ ಮೇಲೆ ಕಳುಹಿಸಿದ ಸರ್ಕಾರ..!

- Advertisement -G L Acharya panikkar
- Advertisement -

ಕರಸೇವಕರ ಬಂಧನ ಮಾಡಿ ಇಕ್ಕಟ್ಟಿಗೆ ಸಿಲುಕಿರುವ ಸರ್ಕಾರ ಈಗ ಶ್ರೀಕಾಂತ್ ಪೂಜಾರಿಯನ್ನು ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದ ಶಹರ ಠಾಣೆಯ ಇನ್ಸ್‌ಪೆಕ್ಟರ್‌ ಅವರನ್ನು ಕಡ್ಡಾಯ ರಜೆಯ ಮೇಲೆ ಸರ್ಕಾರ ಕಳುಹಿಸಿದೆ.

ಶ್ರೀಕಾಂತ್‌ ಪೂಜಾರಿಯನ್ನು ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದ ಮಹಮದ್ ರಫೀಕ್ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಅವರ ಜಾಗಕ್ಕೆ ಪ್ರಭಾರಿ ಇನ್ಸ್‌ಪೆಕ್ಟರ್‌ ಆಗಿ ಬಿಎ ಜಾಧವ್ ಅವರನ್ನು ನೇಮಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರು ಬಿಎ ಜಾಧವ್‌ಗೆ ಪ್ರಭಾರಿ ಠಾಣಾಧಿಕಾರಿಯಾಗಿ ಹೆಚ್ಚುವರಿ ಅಧಿಕಾರ ನೀಡಿದ್ದಾರೆ.

ಡಿ. 29 ರಂದು ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ದ ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಇನ್ಸಪೆಕ್ಟರ್ ಅಮಾನತಿಗೆ ಆಗ್ರಹಿಸಿ ಬಿಜೆಪಿ ನಾಯಕರು ಭಾರೀ ಪ್ರತಿಭಟನೆ ನಡೆಸಿದ್ದರು.

ಹಳೇಯ ಪ್ರಕರಣಗಳನ್ನು ವಿಲೇವಾರಿ ಮಾಡುವಾಗ ಬಂಧನ ಮಾಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸಮರ್ಥಿಸಿಕೊಳ್ಳುವ ಸರ್ಕಾರ ಠಾಣೆಯ ಇನ್ಸ್‌ಪೆಕ್ಟರ್‌ ರಫೀಕ್‌ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸುವ ಅಗತ್ಯವೇ ಇರಲಿಲ್ಲ. ಕಾನೂನು ಪ್ರಕಾರವೇ ನಡೆದುಕೊಂಡಿದ್ದರೆ ಪ್ರಭಾರಿಯನ್ನು ನೇಮಿಸುವ ಅಗತ್ಯವೇ ಇರಲಿಲ್ಲ. ಕಡ್ಡಾಯ ರಜೆಯ ಮೇಲೆ ಇನ್ಸ್‌ಪೆಕ್ಟರ್‌ ಅವರನ್ನು ಬಂಧಿಸಿ ಇಕ್ಕಟ್ಟಿಗೆ ಸಿಲುಕಿರುವ ಸರ್ಕಾರ ಪರೋಕ್ಷವಾಗಿ ತಪ್ಪನ್ನು ಒಪ್ಪಿಕೊಂಡಂತೆ ಕಾಣುತ್ತಿದೆ. ಆ ಜಾಗಕ್ಕೆ ಜಾದವ್‌ ಅವರಿಗೆ ಪ್ರಭಾರ ಅಧಿಕಾರ ಕೊಟ್ಟಿದ್ದು ಯಾಕೆ? ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳುವುದಕ್ಕೆ ಈ ತಂತ್ರ ಮಾಡಿದ್ಯಾ ಎಂಬ ಹಲವು ಪ್ರಶ್ನೆಗಳು ಈಗ ಎದ್ದಿದೆ.

- Advertisement -

Related news

error: Content is protected !!