Thursday, July 3, 2025
spot_imgspot_img
spot_imgspot_img

ವಸಂತ ಪಂಚಮಿಯ ಪವಿತ್ರ ದಿನ; ತ್ರಿವೇಣಿ ಸಂಗಮದಲ್ಲಿ ಭಕ್ತರಿಂದ 3ನೇ ಅಮೃತಸ್ನಾನ

- Advertisement -
- Advertisement -

ಪ್ರಯಾಗ್‌ರಾಜ್: ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭಮೇಳಕ್ಕೆ ಫೆ.3ರ ಸೋಮವಾರ ಕೋಟ್ಯಂತರ ಭಕ್ತರು ಹರಿದುಬರುತ್ತಿದ್ದಾರೆ. ಇಂದು ವಸಂತ ಪಂಚಮಿಯ ಪವಿತ್ರ ದಿನವಾಗಿದ್ದು, ತ್ರಿವೇಣಿ ಸಂಗಮದಲ್ಲಿ ಭಕ್ತರು ಮೂರನೇ ಅಮೃತ ಪುಣ್ಯಸ್ನಾನ ಮಾಡಿದ್ದಾರೆ.

ಕುಂಭಮೇಳದಲ್ಲಿ ಬೆಳಗಿನ ಜಾವವೇ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ನಾಗ ಸಾಧುಗಳು ಸ್ನಾನ ಮಾಡಿದರು. ನಂತರ ಇತರ ಭಕ್ತರು ಸ್ನಾನ ಮಾಡುವುದರೊಂದಿಗೆ ಆಚರಣೆ ಪ್ರಾರಂಭವಾಯಿತು. ಮಹಾ ಕುಂಭಮೇಳ ಪ್ರಾರಂಭವಾದಾಗಿನಿಂದ ಸ್ನಾನ ಮಾಡಿದವರ ಸಂಖ್ಯೆ ಇದುವರೆಗೂ 35 ಕೋಟಿಯಷ್ಟಾಗಿದೆ.

ಇಂದು ಕನಿಷ್ಠ ಮೂರು ಕೋಟಿ ಜನರು ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದೆ. ಇತ್ತೀಚೆಗೆ ಕುಂಭಮೇಳದಲ್ಲಿ ಜನಸಂದಣಿಯಿಂದಾಗಿ ಕಾಲ್ತುಳಿತಕ್ಕೆ 30 ಜನರು ಸಾವನ್ನಪ್ಪಿದ್ದರು. ಈ ದುರಂತ ಮತ್ತೆ ಸಂಭವಿಸಬಾರದು ಎಂದು ಜನಸಂದಣಿ ನಿರ್ವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಕುಂಭಮೇಳದಲ್ಲಿ ನಡೆಯುವ ಪವಿತ್ರ ಶಾಹಿಸ್ನಾನದಲ್ಲಿ ವಸಂತ ಪಂಚಮಿ ಪ್ರಮುಖವಾಗಿದೆ. ಫೆ.12 ರಂದು ಮಹಾ ಪೂರ್ಣಿಮೆ ಮತ್ತು ಫೆ.26 ರಂದು ಮಹಾ ಶಿವರಾತ್ರಿ ದಿನ ಕೊಲೆ ಪುಣ್ಯ ಸ್ನಾನ ನೆರವೇರಲಿದೆ.

- Advertisement -

Related news

error: Content is protected !!