Saturday, May 4, 2024
spot_imgspot_img
spot_imgspot_img

ಉಳ್ಳಾಲ: ಮನೆಗೆ ಸಿಡಿಲು ಬಡಿದು ಹಾನಿ

- Advertisement -G L Acharya panikkar
- Advertisement -

ಉಳ್ಳಾಲ : ಅಕಾಲಿಕ ಮಳೆಯ ಸಂದರ್ಭದಲ್ಲಿಯೇ ಮನೆಯೊಂದಕ್ಕೆ ಸಿಡಿಲು ಬಡಿದು ವಿದ್ಯುತ್ ಸಲಕರಣೆಗಳು ಸುಟ್ಟು ಹೋಗಿ ಅಪಾರ ನಷ್ಟ ಉಂಟಾದ ಘಟನೆ ಉಳ್ಳಾಲ ಬಂಡಿಕೊಟ್ಯದ ನೇಲ್ಯ ಇಲ್ ಎಂಬಲ್ಲಿ ಸಂಭವಿದೆ.

ಉಳ್ಳಾಲ ಬಂಡಿಕೊಟ್ಯದ ಪ್ರವೀಣ್ ಗುರಿಕಾರ ಎಂಬವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಸಲಕರಣೆಗಳಿಗೆ ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ. ವಿದ್ಯುತ್ ವೈರ್, ಸೇರಿದಂತೆ ಹಲವು ಸಲಕರಣೆಗಳು ಸಂಪೂರ್ಣ ಸುಟ್ಟು ನಷ್ಟ ಸಂಭವಿಸಿದೆ. ಬೆಳಗ್ಗೆ ಮನೆಮಂದಿ ಮನೆಯಲ್ಲಿದ್ದ ಸಂದರ್ಭ ಘಟನೆ ನಡೆದಿದೆ. ಕಂದಾಯ ಇಲಾಖೆಗೆ ಈ ಕುರಿತು ದೂರು ನೀಡಲಾಗಿದೆ.

- Advertisement -

Related news

error: Content is protected !!