Saturday, June 20, 2026
spot_imgspot_img
spot_imgspot_img

ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತ್ನಿಗೆ ಸಿಗರೇಟ್‌ನಿಂದ ಮೈ-ಕೈ ಸುಟ್ಟು ಕಿರುಕುಳ ನೀಡುತ್ತಿದ್ದ ಪತಿ

- Advertisement -
- Advertisement -

ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ಪತ್ನಿಗೆ ಸಿಗರೇಟ್‌ನಿಂದ ಮೈ-ಕೈ ಸುಟ್ಟು, ಕಚ್ಚಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ತುಮಕೂರಿನಲ್ಲಿ ಚಾಲಕನಾಗಿರುವ ಗೋವಿಂದರಾಜು ಎಂಬಾತ ಮಹಿಳೆಯನ್ನು 3 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ತುಮಕೂರಿನ ಪಂಡಿತನಹಳ್ಳಿ‌ಯಲ್ಲಿ ವಾಸವಾಗಿದ್ದ, ಇವರಿಬ್ಬರ ದಾಂಪತ್ಯವು ಮೊದಮೊದಲು ಚೆನ್ನಾಗಿಯೇ ಇತ್ತು. ಆದರೆ ಮಕ್ಕಳಾಗದ ಹಿನ್ನೆಲೆಯಲ್ಲಿ ಗೋವಿಂದರಾಜು ಕುಡಿದು ಬಂದು ಪತ್ನಿಗೆ ದಿನನಿತ್ಯ ಕಿರುಕುಳ ನೀಡಲು ಆರಂಭಿಸಿದ್ದ ಎಂಬ ಆರೋಪ ಕೇಳಿಬಂದಿದೆ.

ಅಷ್ಟೇ ಅಲ್ಲದೇ ಗೋವಿಂದರಾಜು ಸಿಗರೇಟ್‌ನಿಂದ ಮೈ-ಕೈ ಸುಡುವುದು, ಕಚ್ಚುವುದು ಹಾಗೂ ಕಟ್ಟಿಗೆಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಮಕ್ಕಳಾಗಿಲ್ಲ ಅಂತಲೂ ನಿಂದನೆ ಮಾಡುತ್ತಿದ್ದ. ಪತಿಯ ನಿರಂತರ ಕಿರುಕುಳಕ್ಕೆ ಬೇಸತ್ತ ಪತ್ನಿಯು ಐದಾರು ಬಾರಿ‌ ಹೆಬ್ಬೂರು ಠಾಣೆ ಹಾಗೂ ಮಹಿಳಾ‌ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಯತ್ನಿಸಿದ್ದಾಳೆ. ಆದರೆ ದೂರು ದಾಖಲಿಸಿಕೊಳ್ಳದೇ ಪೊಲೀಸರು ರಾಜಿ ಮಾಡಿಸಲು ಮುಂದಾಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.

- Advertisement -

Related news

error: Content is protected !!