Saturday, May 18, 2024
spot_imgspot_img
spot_imgspot_img

ಹೊಸ ಜೀವನಕ್ಕೆ ಕಾಲಿಟ್ಟ ದಿನವೇ ಪರೀಕ್ಷೆಗೆ ಹಾಜರಾದ ನವವಧು

- Advertisement -G L Acharya panikkar
- Advertisement -

ಹೊಸ ಜೀವನಕ್ಕೆ ಕಾಲಿಟ್ಟ ದಿನವೇ ನವವಧುವೊಬ್ಬರು ಪರೀಕ್ಷೆಗೆ ಹಾಜರಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ಭರ್ಮಪ್ಪ ನಗರದ ಸತ್ಯವತಿ ಹಾಗೂ ಖಾಸಗಿ ಕಂಪನಿ ಉದ್ಯೋಗಿ ಚೆನ್ನೈ ಮೂಲದ ಫ್ರಾನ್ಸಿಸ್‌ಗೆ ಕಳೆದ ಎರಡು ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿತ್ತು. ಪರಿಚಯವಾಗಿ ಇಬ್ಬರ ನಡುವೆ ಪ್ರೀತಿ ಪ್ರೇಮಾಂಕುರವಾಗಿತ್ತು. ಹೀಗಾಗಿ ಸತ್ಯವತಿ ಹಾಗೂ ಫ್ರಾನ್ಸಿಸ್ ಹಿರಿಯರನ್ನು ಒಪ್ಪಿಸಿ ಭಾನುವಾರ ಮನೆಯಲ್ಲಿಯೇ ಸರಳವಾಗಿ ವಿವಾಹವಾದರು.

ಆದರೆ ಸತ್ಯವತಿ ಪದವಿ ಕಾಲೇಜುವೊಂದರಲ್ಲಿ ಅಂತಿಮ ವರ್ಷದ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದು, ಇಂದು ಅರ್ಥಶಾಸ್ತ್ರ ವಿಷಯದ ಪರೀಕ್ಷೆ ಇತ್ತು. ಹೀಗಾಗಿ ಭಾನುವಾರ ಮುಂಜಾನೆ ತಾಳಿ ಕಟ್ಟಿಸಿಕೊಂಡ ಸತ್ಯವತಿಯನ್ನು ವರ ಫ್ರಾನ್ಸಿಸ್ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಹೋದರು. ಪರೀಕ್ಷೆ ನಂತರ ನವವಧು ಮತ್ತೆ ಮದುವೆ ಮಂಟಪಕ್ಕೆ ತೆರಳಲಿದ್ದು, ಮುಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

- Advertisement -

Related news

error: Content is protected !!