Thursday, May 2, 2024
spot_imgspot_img
spot_imgspot_img

5 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವವಿವಾಹಿತೆ ನೇಣಿಗೆ ಶರಣು; ವರದಕ್ಷಿಣೆ ಕಿರುಕುಳ ಆರೋಪ

- Advertisement -G L Acharya panikkar
- Advertisement -

ಕೇವಲ ಐದು ತಿಂಗಳ ಹಿಂದಷ್ಟೇ ಹೊಸ ಕನಸುಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿಯೊಬ್ಬಳು ವರದಕ್ಷಿಣೆ ಎನ್ನುವ ಪೆಡಂಭೂತಕ್ಕೆ ಬಲಿಯಾಗಿದ್ದಾಳೆ. ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ಉಮಾ ವಿಷ್ಣು ಎಮ್ಮಿ (23) ಆತ್ಮಹತ್ಯೆ‌ ಮಾಡಿಕೊಂಡ ಯುವತಿ. ರಾತ್ರಿ ಈಕೆ ಬೆಡ್ ರೂಮ್‌ನಲ್ಲಿರುವ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನೂರಾರು ಕನಸುಗಳೊಂದಿಗೆ ಕೇವಲ ಐದು ತಿಂಗಳ ಹಿಂದಷ್ಟೇ ವಿಷ್ಣು ಎಂಬ ಯುವಕನೊಂದಿಗೆ ಹೊಸ ಬದುಕಿಗೆ ಉಮಾ ಕಾಲಿಟ್ಟಿದ್ದಳು. ಮದುವೆಯ ಸಂದರ್ಭದಲ್ಲೇ ಉಮಾಳ ತಾಯಿ-ತಂದೆ ಸಾಕಷ್ಟು ಹಣ ಮತ್ತು ಒಡವೆಗಳನ್ನು ಕೊಟ್ಟು ಮದುವೆ ಮಾಡಿಸಿದ್ದರು. ಆದರೆ, ಮದುವೆಯಾಗಿ ಕೆಲವೇ ದಿನಗಳಲ್ಲಿ ಗಂಡನ ಮನೆಯವರು ಇನ್ನೂ ಹೆಚ್ಚು ವರದಕ್ಷಿಣೆ, ಬಂಗಾರ ತರುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದರು.

ಗಂಡನ ಮನೆಯವರು ಹೊಸದಾಗಿ ಇಟ್ಟ ಬೇಡಿಕೆ ನಾಲ್ಕು ಲಕ್ಷ ರೂಪಾಯಿ. ಉಮಾ ಈ ವಿಷಯವನ್ನು ಮನೆಯಲ್ಲಿ ತಿಳಿಸಿದ್ದಳು. ಮಗಳ ಬದುಕು ಚೆನ್ನಾಗಿರಲಿ ಎಂದು ತವರು ಮನೆಯವರು ಕಷ್ಟಪಟ್ಟು 3.5 ಲಕ್ಷ ರೂ. ಆಗಲೇ ಕೊಟ್ಟಿದ್ದರು. ಆದರೆ, ಬಾಕಿ 50 ಸಾವಿರ ರೂಪಾಯಿ ಹಣ ತರುವಂತೆ ಗಂಡ ಹಾಗೂ ಅತ್ತೆಯಿಂದ ಕಿರುಕುಳ ಮುಂದುವರಿದಿತ್ತು.

ಈ ವಿಚಾರವಾಗಿ ಹಲವು ಬಾರಿ ರಾಜಿ ಸಂಧಾನ ಮಾಡಿಸಲಾಗಿತ್ತು. ಆದರೆ, ಆ ಕ್ಷಣಕ್ಕೆ ಒಪ್ಪಿಕೊಳ್ಳುವ ವಿಷ್ಣು ಮತ್ತು ಮನೆಯವರು ಬಳಿಕ ಮತ್ತೆ ಹಿಂಸೆಗೆ ಇಳಿಯುತ್ತಿದ್ದರು. ಇದನ್ನೆಲ್ಲ ಸಹಿಸಲು ಸಾಧ್ಯವೇ ಇಲ್ಲದೆ ಉಮಾ ಮನೆಯಲ್ಲಿನ ಬೆಡ್ ರೂಮ್‌ನಲ್ಲಿರುವ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಮಾಹಿತಿ ಪಡೆದು ಧಾವಿಸಿದ ಉಮಾಳ ಸಹೋದರ ಗದಗ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.

ಉಮಾ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆಯೇ ಗಂಡ ವಿಷ್ಣು, ಅತ್ತೆ ಮತ್ತು ಇತರರು ಎಸ್ಕೇಪ್‌ ಆಗಿದ್ದಾರೆ. ವಿಷ್ಣುವಿನ ತಾಯಿ ಗಿರಿಜಾ ಕೂಡಾ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು ಸೊಸೆಯ ಸಾವಿನ ಹೆದರಿಕೆಯಿಂದ ಆಕೆ ತಪ್ಪಿಸಿಕೊಂಡಿದ್ದಾಳೆ.

ಪರಾರಿಯಾಗಿರುವ ಉಮಾಳ ಅತ್ತೆ, ಮಾವನನ್ನು ಕರೆದುಕೊಂಡು ಬಾರದಿದ್ದರೆ ಹೆಣವನ್ನು ತೆಗೆಯಲು ಬಿಡುವುದಿಲ್ಲ ಎಂದು ಉಮಾಳ ಹೆತ್ತವರು ಹೇಳಿದ್ದಾರೆ. ಮಾತ್ರವಲ್ಲ, ಹೆಣ ಒಯ್ಯಲು ಬಂದ ಆಂಬ್ಯುಲೆನ್ಸ್‌ ಅಡ್ಡ ಮಲಗಿ ಪ್ರತಿಭಟನೆ ನಡೆಸಿದ್ದಾರೆ.

- Advertisement -

Related news

error: Content is protected !!